alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಂಗ್ಲಾ ವಿರುದ್ಧ ಗೆಲುವಿನ ನಗೆ ಬೀರಿದ ಟೀಂ ಇಂಡಿಯಾ

ದುಬೈನಲ್ಲಿ ನಿನ್ನೆ ನಡೆದ ಸೂಪರ್ ಫೋರ್ ಕಾದಾಟದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದೆ. ಭುವನೇಶ್ವರ್ ಕುಮಾರ್, ಜಸ್ಪ್ರಿತ್ ಬೂಮ್ರಾ ಹಾಗೂ ಅನುಭವಿ ಸ್ಪಿನ್ ಬೌಲರ್ ರವೀಂದ್ರ ಜಡೇಜಾರ ಮಾರಕ ದಾಳಿಯ ಫಲವಾಗಿ ರೋಹಿತ್ ಪಡೆ 7 ವಿಕೆಟ್ ಗಳಿಂದ ಬಾಂಗ್ಲಾ ತಂಡವನ್ನು ಮಣಿಸಿದೆ.

ಟಾಸ್ ಸೋತರೂ, ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿದೆ. ಓಪನರ್ಸ್ ಗಳಿಗೆ ಭುವಿ, ಬೂಮ್ರಾ ಖೆಡ್ಡಾ ತೋಡಿ ಅಬ್ಬರಿಸಿದ್ದಾರೆ. ಅನುಭವಿ ಶಕೀಬ್ ಅಲ್ ಹಸನ್ ಹಾಗೂ ಮುಷ್ಫೀಕರ್ ರಹೀಮ್ ತಂಡಕ್ಕೆ  26 ರನ್‌ಗಳ ಅಲ್ಪ ಕಾಣಿಕೆಯನ್ನು ನೀಡಿದ್ರು. ಉಳಿದಂತೆ ಮಧ್ಯಮ ಕ್ರಮಾಂಕಿತ ಬ್ಯಾಟ್ಸ್ ಮನ್ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು.

7ನೇ ವಿಕೆಟ್ ಗೆ ಮುಷ್ರಾಫೆ ಮೊರ್ತಾಜ್ ಹಾಗೂ ಮೆಹದಿ ಹಸನ್ ಮಿರ್ಜಾ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಈ ಜೋಡಿ ಕೊಂಚ ಟೀಮ್ ಇಂಡಿಯಾದ ನಾಯಕನ ಮುಖದಲ್ಲಿ ಚಿಂತೆಯ ಗೆರೆ ಮೂಡಿಸಿತು. ತಾಳ್ಮೆಯ ಬ್ಯಾಟಿಂಗ್ ನಡೆಸಿದ ಜೋಡಿ 66 ರನ್ ಗಳ ಜೊತೆಯಾಟ ನೀಡಿತು. ಮುಷ್ರಾಫೆ 26 ಹಾಗೂ ಮೆಹದಿ 42 ರನ್ ಬಾರಿಸಿ ಔಟ್ ಆದ್ರು.

ಅಂತಿಮವಾಗಿ ಬಾಂಗ್ಲಾ ತಂಡ 49.1 ಓವರ್‌ಗಳಲ್ಲಿ 173 ರನ್ ಗೆ ಆಲೌಟ್ ಆಯಿತು. ಭಾರತದ ಪರ ರವೀಂದ್ರ ಜಡೇಜಾ 4 ಹಾಗೂ ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರಿತ್ ಬೂಮ್ರಾ ತಲಾ ಮೂರು ವಿಕೆಟ್ ಕಬಳಿಸಿದ್ರು.

ಸಾಧಾರಣ ಗುರಿಯನ್ನು ಹಿಂಬಾಲಿಸಿದ ರೋಹಿತ್ ಪಡೆಯ ಆರಂಭ ಭರ್ಜರಿಯಾಗಿತ್ತು. ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ತಂಡಕ್ಕೆ ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿದ್ರು. ಧವನ್, ಶಕೀಬ್ ಎಸೆತವನ್ನು ತಪ್ಪಾಗಿ ಗ್ರಹಿಸಿ ಔಟ್ ಆದ್ರು.

ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು ಜವಾಬ್ದಾರಿ ಮರೆತರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದ ಧೋನಿ, ರೋಹಿತ್ ಗೆ ಉತ್ತಮ ಸಾಥ್ ನೀಡಿದ್ರು. ಈ ಜೋಡಿ 3ನೇ ವಿಕೆಟ್ ಗೆ 70 ಎಸೆತಗಳಲ್ಲಿ 64 ರನ್ಗಳ ಜೊತೆಯಾಟದ ಕಾಣಿಕೆ ನೀಡಿತು. ಗೆಲುವಿನ ಸನಿಹದಲ್ಲಿ ಧೋನಿ, ಇಲ್ಲದ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದ್ರು.

ರೋಹಿತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್ ತಂಡಕ್ಕೆ ಅಗತ್ಯ ರನ್ ಕಲೆ ಹಾಕಿ, ಜಯದಲ್ಲಿ ಮಿಂಚಿದ್ರು. ರೋಹಿತ್ ಶರ್ಮಾ 104 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ನೆರವಿನಿಂದ 83 ರನ್ ಬಾರಿಸಿ ಅಜೇಯರಾಗಿ ಉಳಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...