alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳ ಹೃದಯ ಗೆದ್ದಿದೆ ಕೊಹ್ಲಿ ಮಾಡಿದ ಕೆಲಸ….

virat-kohli_650x400_81490423284

ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಗಾಯಾಳು ವಿರಾಟ್ ಕೊಹ್ಲಿ ಆಡ್ತಾ ಇಲ್ಲ ಅನ್ನೋ ಸುದ್ದಿ ಕೇಳಿ ಅವರ ಅಪಾರ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಆದ್ರೆ  ಪಂದ್ಯದ ಮೊದಲ ದಿನವಾದ ಇಂದು ವಿರಾಟ್ ಮಾಡಿದ ಒಂದು ಕೆಲಸ ಎಲ್ಲರ ಹೃದಯ ಗೆದ್ದಿದೆ. ಅವರ ಬಗೆಗಿನ ಅಭಿಮಾನವನ್ನು ಇನ್ನಷ್ಟು ಹೆಚ್ಚಿಸಿದೆ.

ತಾನೊಬ್ಬ ಕ್ಯಾಪ್ಟನ್ ಅನ್ನೋ ಅಹಂ ಬೆಳೆಸಿಕೊಳ್ಳದೆ ಕೊಹ್ಲಿ ಸರಳತನ ಮೆರೆದಿದ್ದಾರೆ. ಪಂದ್ಯದ ನಡುವೆ ಡ್ರಿಂಕ್ಸ್ ಬ್ರೇಕ್ ನಲ್ಲಿ ಖುದ್ದು ಕೊಹ್ಲಿ ತಂಡದ ಆಟಗಾರರಿಗಾಗಿ ನೀರು ಮತ್ತು ಇತರ ಪಾನೀಯಗಳನ್ನು ತಂದುಕೊಟ್ಟಿದ್ದಾರೆ. ಕೊಹ್ಲಿ ಡ್ರಿಂಕ್ಸ್ ಹಿಡಿದು ಬರ್ತಾ ಇದ್ದಂತೆ ಅಭಿಮಾನಿಗಳೆಲ್ಲ ಹರ್ಷೋದ್ಘಾರ ಮಾಡಿದ್ರು. ನಾಯಕನ ಸಿಂಪ್ಲಿಸಿಟಿಯನ್ನು ಮೆಚ್ಚಿಕೊಂಡ್ರು.

ಫೇಸ್ಬುಕ್ ನಲ್ಲಿ ಈ ವಿಡಿಯೋ ಅಪ್ ಲೋಡ್ ಆಗಿದ್ದು, ಒಂದು ಗಂಟೆಯಲ್ಲಿ 15,000ಕ್ಕೂ ಹೆಚ್ಚು ಕಮೆಂಟ್ಸ್ ಬಂದಿವೆ. ವಿರಾಟ್ ಒಬ್ಬ ದುಬಾರಿ ಡ್ರಿಂಕ್ಸ್ ಬಾಯ್ ಅಂತಾ ಆಸ್ಟ್ರೇಲಿಯಾದ ಬ್ರೆಟ್ ಲೀ ತಮಾಷೆ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಕೂಡ ಕೊಹ್ಲಿಗೆ ಮೆಚ್ಚುಗೆಯ ಸುರಿಮಳೆಯಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...