alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಟಿ-20 ಪಂದ್ಯದಲ್ಲಿ ಭಾರತಕ್ಕೆ ವಿರೋಚಿತ ಸೋಲು

ಬ್ರಿಸ್ಬೇನ್ ನಲ್ಲಿ ಭಾರತ-ಆಸ್ಟ್ರೇಲಿಯಾ ಮಧ್ಯೆ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. ಆಸ್ಟ್ರೇಲಿಯಾ, ಭಾರತದ ವಿರುದ್ಧ ನಾಲ್ಕು ರನ್ ಗಳ ಜಯ ಸಾಧಿಸಿದೆ. ಮಳೆ ಕಾರಣ ಪಂದ್ಯವನ್ನು 17 ಓವರ್ ಗಳಿಗೆ ಇಳಿಕೆ ಮಾಡಲಾಗಿತ್ತು.

ಆಸ್ಟ್ರೇಲಿಯಾ ತಂಡ 17 ಓವರ್ ಗೆ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು. ಡಕ್ವರ್ತ್ ನಿಯಮದಡಿ ಭಾರತಕ್ಕೆ 174 ರನ್ ಗಳ ಗುರಿ ನೀಡಿತ್ತು. ಗುರಿ ಬೆನ್ನು ಹತ್ತಿದ ಭಾರತಕ್ಕೆ 16.1 ಓವರ್ ನಲ್ಲಿ ಮಳೆ ಎದುರಾಯ್ತು. ಮಳೆ ಕಾರಣ ಪಂದ್ಯವನ್ನು ಸ್ವಲ್ಪ ಕಾಲ ನಿಲ್ಲಿಸಲಾಗಿತ್ತು. ಮತ್ತೆ ಬ್ಯಾಟಿಂಗ್ ಶುರು ಮಾಡಿದ ಭಾರತಕ್ಕೆ 17 ಓವರ್ ಗಳನ್ನು ಮಾತ್ರ ನೀಡಲಾಯ್ತು. ಟಾರ್ಗೆಟ್ ಬೆನ್ನು ಹತ್ತಿರ ಭಾರತ 17 ಓವರ್ ಗೆ 7 ವಿಕೆಟ್ ಕಳೆದುಕೊಂಡು 169 ರನ್ ಗಳಿಸಲು ಶಕ್ತವಾಯ್ತು.

ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್  ಅತಿ ಹೆಚ್ಚು 46 ರನ್ ಗಳಿಸಿದ್ರು. 24 ಬಾಲಿಗೆ ನಾಲ್ಕು ಸಿಕ್ಸ್ ಬಾರಿಸಿ 46 ರನ್ ಗಳಿಸಿದ್ರು. ಜಸ್ಪ್ರೀತ್ ಬುಮ್ರಾ ಮತ್ತು ಖಲೀಲ್ ಅಹ್ಮದ್ ಎರಡು ವಿಕೆಟ್ ಕಬಳಿಸಿದ್ದರು. ಭಾರತಕ್ಕೆ ಶಿಖರ್ ಧವನ್ ಆಸರೆಯಾಗಿದ್ದರು. ಧವನ್ 76 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...