alex Certify
ಕನ್ನಡ ದುನಿಯಾ       Mobile App
       

Kannada Duniya

ಇತಿಹಾಸದ ಪುಟ ಸೇರಿದ ಇಂಡೋ-ಆಫ್ಘಾನ್ ಪಂದ್ಯ

ನಿನ್ನೆ ರಾತ್ರಿ ಅಕ್ಷರಶಃ, ಟೀಮ್ ಇಂಡಿಯಾ ಅಭಿಮಾನಿಗಳ ನಿದ್ದೆ ಮಾಯವಾಗಿತ್ತು. ಅತ್ತ ದುಬೈನಲ್ಲಿ ಆಫ್ಘಾನ್ ಬೌಲರ್ ಗಳು ಶಿಸ್ತುಬದ್ಧ ದಾಳಿ ನಡೆಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ರೆ, ಇತ್ತ ಭಾರತದ ಅಭಿಮಾನಿಗಳು ದೇವರ ಮೊರೆ ಹೋಗಿದ್ರು. ಸೂಪರ್ ಫೋರ್ ನಲ್ಲಿ ಅಫ್ಘಾನಿಸ್ತಾನ ತಂಡ ಆಡಿದ ಧಾಟಿಗೆ ಜಗತ್ತೇ ಸಲಾಂ ಎಂದಿದೆ.

ಹೌದು….ಪಂದ್ಯದ ಕೊನೆಯ ಓವರ್ ವರೆಗೂ ವಿಜಯಲಕ್ಷ್ಮಿ ಚಂಚಲೆಯಾಗಿದ್ದಳು. ಒಂದು ಬಾರಿ ವಿಜಯಲಕ್ಷ್ಮಿ ಟೀಮ್ ಇಂಡಿಯಾ ಪರ ವಾಲಿದರೆ, ಇನ್ನೊಮ್ಮೆ ಅಫ್ಘಾನಿಸ್ತಾನ ತಂಡದ ಪರ ವಾಲುತ್ತಿದ್ದಳು. ನಿಶ್ಚಿತವಾಗಿ ಮೈದಾನದಲ್ಲಿ ಕುಳಿತು ಪಂದ್ಯ ವೀಕ್ಷಣೆ ಮಾಡಿದ ಅಭಿಮಾನಿಗಳು ಕುರ್ಚಿಯ ತುದಿಯಲ್ಲಿ ಕುಳಿತು, ಬೆರಳುಗಳನ್ನು ತಳಕು ಹಾಕಿಕೊಂಡು, ದೇವರಲ್ಲಿ ಪ್ರಾರ್ಥನೆ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.

ಕೊನೆ ಓವರ್ ನಲ್ಲಿ ಗೆಲುವಿಗೆ ಬೇಕಿತ್ತು 7 ರನ್. ಟೀಮ್ ಇಂಡಿಯಾ ಬಳಿ ಇತ್ತು ಕೇವಲ ಒಂದು ವಿಕೆಟ್. ಅಫ್ಘಾನಿಸ್ತಾನ ತಂಡದ ಅನುಭವಿ ಸ್ಪಿನ್ನರ್ ರಶೀದ್ ಖಾನ್ ಬೌಲ್ ಮಾಡಲು ಸಿದ್ಧರಾದ್ರು. ಇತ್ತ ಟೀಮ್ ಇಂಡಿಯಾದ ಭರವಸೆಯ ಆಟಗಾರ ರವೀಂದ್ರ ಜಡೇಜಾ ಅಬ್ಬರಿಸಲು ರೆಡಿ. ಕೊನೆಯ ಓವರ್ ನ ಎರಡನೇ ಎಸೆತದಲ್ಲಿ ಜಡ್ಡು ಬೌಂಡರಿ ಬಾರಿಸಿದ್ರು. ಪಂದ್ಯದ ರೋಚಕತೆ ಹೆಚ್ಚಾಗಿತ್ತು.

ರೋಚಕ ಪಂದ್ಯ ನೋಡಿದ ಅಭಿಮಾನಿಗಳು ಫುಲ್ ಖುಷ್. 2 ಬೌಲ್ 1 ರನ್ ಅವಶ್ಯಕವಿದ್ದಾಗ ಜಡೇಜಾ ಇಲ್ಲದ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದ್ರು. ಟೀಮ್ ಇಂಡಿಯಾ ಗೆಲ್ಲಬಹುದಾದ ಪಂದ್ಯವನ್ನು ಟೈ ಮಾಡಿಕೊಂಡಿತು. ಈ ಮೂಲಕ ಏಕದಿನ ಕ್ರಿಕೆಟ್ ನಲ್ಲಿ 36ನೇ ಟೈ ಆದ ಪಂದ್ಯ ಎಂಬ ಹೆಗ್ಗಳಿಕೆ ಈ ಪಂದ್ಯಕ್ಕೆ ಲಭಿಸಿತು.

ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ಗೆ 252 ರನ್ ಕಲೆ ಹಾಕಿತ್ತು. ಆರಂಭಿಕ ಮೊಹಮ್ಮದ್ ಶಹಜಾದ್ ಶತಕ ಬಾರಿಸಿದ್ರೆ, ಮೊಹಮ್ಮದ್ ನಬಿ ಅರ್ಧ ಶತಕ ಬಾರಿಸಿ ತಂಡಕ್ಕೆ ಆಸರೆಯಾದ್ರು.

ಸ್ಪರ್ಧಾತ್ಮಕ ಮೊತ್ತ ಹಿಂಬಾಲಿಸಿದ ಭಾರತದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಕೆ.ಎಲ್. ರಾಹುಲ್, ಅಂಬಟಿ ರಾಯುಡು ತಂಡಕ್ಕೆ ಶತಕದ ಜೊತೆಯಾಟ ನೀಡಿದ್ರು. ಅಲ್ಲದೆ ಇಬ್ಬರು ಆರಂಭಿಕರು ಅರ್ಧ ಶತಕ ಬಾರಿಸಿ ಅಬ್ಬರಿಸಿದ್ರು. ದಿನೇಶ್ ಕಾರ್ತಿಕ್ ರನ್ನು ಹೊರತುಪಡಿಸಿ ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದ ಆಟಗಾರರು ಜವಾಬ್ದಾರಿ ಮರೆತರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...