alex Certify
ಕನ್ನಡ ದುನಿಯಾ       Mobile App
       

Kannada Duniya

ದ.ಆಪ್ರಿಕಾದಲ್ಲಿ ನಡೆಯಬೇಕಿದ್ದ ಭಾರತದ ಅಭ್ಯಾಸ ಪಂದ್ಯ ರದ್ದು

ಮುಂದಿನ ವರ್ಷ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟೆಸ್ಟ್ ಪಂದ್ಯಗಳನ್ನಾಡಲಿದೆ. ಆದ್ರೆ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆಯಬೇಕಿದ್ದ ಎರಡು ದಿನಗಳ ಅಭ್ಯಾಸ ಪಂದ್ಯ ರದ್ದಾಗಿದೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದೆ.

ಸಿ ಎಸ್ ಎ ಪ್ರಕಾರ, ಅಭ್ಯಾಸ ಪಂದ್ಯದ ಬದಲು ಟೀಂ ಇಂಡಿಯಾ ಆಟಗಾರರು ತರಬೇತಿ ಪಡೆಯಲಿದ್ದಾರಂತೆ. ಯೂರೋಲಕ್ಸ್ ಬೊಲೆಂಡ್ ಪಾರ್ಕ್ ನಲ್ಲಿ ನಡೆಯಬೇಕಿದ್ದ ಅಭ್ಯಾಸ ಪಂದ್ಯ ರದ್ದಾಗಿದೆ. ಈ ಎರಡು ದಿನ ಭಾರತೀಯ ಆಟಗಾರರು ತರಬೇತಿ ಪಡೆಯಲಿದ್ದಾರೆಂದು ಸಿ ಎಸ್ ಎ ಹೇಳಿದೆ.

ಅಭ್ಯಾಸ ಪಂದ್ಯ ರದ್ದುಗೊಳಿಸಲು ಯಾವುದೇ ಅಧಿಕೃತ ಕಾರಣಗಳಿಲ್ಲ. ಮೊಹಮ್ಮದ್ ಸಿರಾಜ್, ಆವೇಶ್ ಖಾನ್, ನವದೀಪ್ ಸೈನಿ ದಕ್ಷಿಣ ಆಫ್ರಿಕಾ ತಂಡದ ಜೊತೆ ದಕ್ಷಿಣ ಆಫ್ರಿಕಾಕ್ಕೆ ಭಾರತೀಯ ಟೀಂ ಜೊತೆ ಹೋಗಲಿದ್ದಾರೆಂದು ಬಿಸಿಸಿಐ ಉನ್ನತ ಮೂಲಗಳು ಹೇಳಿವೆ. ಡೇ-ನೈಟ್ ಏಕದಿನ ಪಂದ್ಯದ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ. ಈ ಎಲ್ಲ ಪಂದ್ಯಗಳು ಅರ್ಧಗಂಟೆ ಮೊದಲು ಆರಂಭವಾಗಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...