alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿಗೆ ಅಗ್ನಿ ಪರೀಕ್ಷೆ

ಡಿಸೆಂಬರ್ 2014 ರಂದು ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಮೊದಲ ಬಾರಿ ಟೆಸ್ಟ್ ತಂಡದ ನಾಯಕತ್ವ ವಹಿಸಿದ್ದರು. ಆಗ ತಾತ್ಕಾಲಿಕ ನಾಯಕರಾಗಿದ್ದ ಕೊಹ್ಲಿ ನಾಲ್ಕು ವರ್ಷಗಳ ನಂತ್ರ ಪೂರ್ಣಕಾಲಿಕ ನಾಯಕರಾಗಿ ಆಸ್ಟ್ರೇಲಿಯಾವನ್ನು ಎದುರಿಸಲಿದ್ದಾರೆ.

2014ರಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಹಾಗಾಗಿ ಕೊಹ್ಲಿ ನಾಲ್ಕನೇ ಟೆಸ್ಟ್ ಪಂದ್ಯದ ನೇತೃತ್ವ ವಹಿಸಿದ್ದರು. ಧೋನಿ ಏಕದಿನ ಮತ್ತು ಟಿ-20 ಪಂದ್ಯದ ನಾಯಕತ್ವ ಕೈಬಿಟ್ಟ ಮೇಲೆ ವಿರಾಟ್ ಕೊಹ್ಲಿ ಪೂರ್ಣಕಾಲಿಕ ನಾಯಕರಾಗಿ ಆಯ್ಕೆಯಾದ್ರು. ಕೊಹ್ಲಿ ಈವರೆಗೆ ಸಾಕಷ್ಟು ಪಂದ್ಯಗಳ ಗೆಲುವಿಗೆ ಕಾರಣರಾಗಿದ್ದಾರೆ. ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿ ಮಾತ್ರ ಕೊಹ್ಲಿ ಕೈತಪ್ಪಿದೆ.

ಭಾರತ ಈವರೆಗೆ ಆಸ್ಟ್ರೇಲಿಯಾದಲ್ಲಿ 11 ಟೆಸ್ಟ್ ಸರಣಿ ಹಾಗೂ ಮೂರು ಟಿ-20 ಸರಣಿಯನ್ನಾಡಿದೆ. 11 ಟೆಸ್ಟ್ ಸರಣಿಯಲ್ಲಿ ಈವರೆಗೆ ಭಾರತ ಒಂದೂ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿಲ್ಲ. ಈ ಬಾರಿ ಕೊಹ್ಲಿ ಪಡೆ ಟೆಸ್ಟ್ ಸರಣಿ ತನ್ನದಾಗಿಸಿಕೊಂಡ್ರೆ ದಾಖಲೆಯಾಗಲಿದೆ.

ಆಸ್ಟ್ರೇಲಿಯಾ ವಿರುದ್ಧ ಭಾರತ ಮೊದಲು ಟಿ-20 ಪಂದ್ಯವನ್ನಾಡಲಿದೆ. ಈವರೆಗೆ ಆಡಿರುವ ಮೂರು ಟಿ-20 ಸರಣಿಯಲ್ಲಿ ಒಂದು ಭಾರತದ ಪಾಲಾದ್ರೆ ಒಂದು ಡ್ರಾ ಆಗಿದೆ. ಇನ್ನೊಂದು ಆಸ್ಟ್ರೇಲಿಯಾ ಪಾಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...