alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಲಂಕಾ ನೆಲದಲ್ಲಿ ಇತಿಹಾಸ ಬರೆದ ಟೀಂ ಇಂಡಿಯಾ

india_win_1502703234_618x347

ಶ್ರೀಲಂಕಾ ನೆಲದಲ್ಲಿ ಟೀ ಇಂಡಿಯಾ ಇತಿಹಾಸ ರಚಿಸಿದೆ. ವಿದೇಶಿ ನೆಲದಲ್ಲಿ ನಡೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ದಾಖಲೆ ಬರೆದಿದೆ. ಶ್ರೀಲಂಕಾ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ 171 ರನ್ ಗಳ ಜಯಸಾಧಿಸಿದ ಟೀಂ ಇಂಡಿಯಾ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.

1932ರಲ್ಲಿ ಟೆಸ್ಟ್ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟ ಟೀಂ ಇಂಡಿಯಾ 85 ವರ್ಷಗಳ ನಂತ್ರ ವಿದೇಶಿ ನೆಲದಲ್ಲಿ ಎರಡಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕಿಂತ ಮೊದಲು 2004ರಲ್ಲಿ ಬಾಂಗ್ಲಾದೇಶ ಹಾಗೂ 2005ರಲ್ಲಿ ಜಿಂಬಾಬ್ವೆಯಲ್ಲಿ ಕ್ಲೀನ್ ಸ್ವಿಪ್ ಸಾಧನೆ ಮಾಡಿತ್ತು. ಆದ್ರೆ ಆಗ ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿತ್ತು. 1967ರಲ್ಲಿ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಅದ್ರಲ್ಲಿ 3-1 ಅಂತರಗಳ ಗೆಲುವು ಸಾಧಿಸಿತ್ತು. ಆದ್ರೆ ಕ್ಲೀನ್ ಸ್ವೀಪ್ ಮಾಡಿರಲಿಲ್ಲ.

ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 487 ರನ್ ಕಲೆ ಹಾಕಿತ್ತು. ಗುರಿ ಬೆನ್ನು ಹತ್ತಿದ್ದ ಶ್ರೀಲಂಕಾ 135 ರನ್ ಗಳಿಸಿ ತನ್ನೆಲ್ಲ ವಿಕೇಟ್ ಒಪ್ಪಿಸಿತ್ತು. ಫಾಲೋಆನ್ ತಪ್ಪಿಸಿಕೊಳ್ಳಲು ಮತ್ತೆ ಕಣಕ್ಕಿಳಿದ ಶ್ರೀಲಂಕಾ 181 ರನ್ ಗಳಿಸಲಷ್ಟೇ ಶಕ್ತವಾಯ್ತು. ಕೊನೆಯ ಪಂದ್ಯವನ್ನು ಟೀಂ ಇಂಡಿಯಾ 171 ರನ್ ಗಳಿಂದ ಗೆಲುವು ತನ್ನದಾಗಿಸಿಕೊಂಡ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...