alex Certify
ಕನ್ನಡ ದುನಿಯಾ       Mobile App
       

Kannada Duniya

ಸರಣಿ ಗೆಲುವಿಗೆ ಭಾರತ – ಲಂಕಾ ಫೈಟ್

ವಿಶಾಖಪಟ್ಟಣ: ಏಕದಿನ ಸರಣಿಯಲ್ಲಿ ತಲಾ 1 ಪಂದ್ಯಗಳನ್ನು ಗೆದ್ದಿರುವ ಭಾರತ ಮತ್ತು ಶ್ರೀಲಂಕಾ ತಂಡಗಳು ವಿಶಾಖಪಟ್ಟಣದ ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಇಂದು ಮುಖಾಮುಖಿಯಾಗಲಿವೆ.

ಮೊದಲ ಪಂದ್ಯವನ್ನು ಶ್ರೀಲಂಕಾ ಜಯಿಸಿದ್ದರೆ, 2 ನೇ ಪಂದ್ಯವನ್ನು ಭಾರತ ಜಯಿಸಿತ್ತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಸರಣಿ ಗೆಲ್ಲಲು ಕಾರ್ಯತಂತ್ರ ರೂಪಿಸಿದೆ. ಇಂದಿನ ಪಂದ್ಯವನ್ನು ಜಯಿಸಿದಲ್ಲಿ ಭಾರತ ಸತತ 8 ನೇ ಸರಣಿಯನ್ನು ಜಯಿಸಿದಂತಾಗುತ್ತದೆ.

ಮೊಹಾಲಿಯಲ್ಲಿ ನಡೆದ ಕಳೆದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ನಾಯಕ ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿಯೂ ಮಿಂಚುವ ವಿಶ್ವಾಸದಲ್ಲಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ, ಹಿಂದೆ ವಿಶಾಖಪಟ್ಟಣ ಮೈದಾನದಲ್ಲಿ ಶತಕ ಗಳಿಸಿದ್ದರು. ಭಾನುವಾರದ ಪಂದ್ಯದಲ್ಲಿ ಅವರು ಕಮಾಲ್ ಮಾಡಲು ಸಜ್ಜಾಗಿದ್ದಾರೆ.

ಬ್ಯಾಟಿಂಗ್ ನಲ್ಲಿ ಶಿಖರ್ ಧವನ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ ಬಲಿಷ್ಠವಾಗಿದ್ದಾರೆ.

ಭಾರತ ತಂಡ 2015 ರ ಅಕ್ಟೋಬರ್ ನಿಂದ ತವರು ನೆಲದಲ್ಲಿ ಏಕದಿನ ಸರಣಿಯಲ್ಲಿ ಸೋತಿಲ್ಲ. ಈ ಸರಣಿಯನ್ನೂ ಜಯಿಸುವ ವಿಶ್ವಾಸದಲ್ಲಿದೆ. ಇಂದು ಮಧ್ಯಾಹ್ನ 1.30 ಕ್ಕೆ ಪಂದ್ಯ ಆರಂಭವಾಗಲಿದೆ. ವಿಶಾಖಪಟ್ಟಣದಲ್ಲಿ 6 ಏಕದಿನ ಪಂದ್ಯಗಳನ್ನಾಡಿರುವ ಭಾರತ 5 ಪಂದ್ಯಗಳನ್ನು ಜಯಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...