alex Certify
ಕನ್ನಡ ದುನಿಯಾ       Mobile App
       

Kannada Duniya

ಭರ್ಜರಿ ಜಯದೊಂದಿಗೆ ಇತಿಹಾಸ ನಿರ್ಮಿಸಿದ ಭಾರತ

ಕೇಪ್ ಟೌನ್: ಕೇಪ್ ಟೌನ್ ನ್ಯೂ ಲ್ಯಾಂಡ್ಸ್ ಮೈದಾನದಲ್ಲಿ ನಡೆದ 3 ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 124 ರನ್ ಗಳ ಅಂತರದಿಂದ ಭರ್ಜರಿ ಜಯಗಳಿಸಿದೆ.

ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್(ಅಜೇಯ 160 ರನ್), ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್ ಅವರ(ತಲಾ 4 ವಿಕೆಟ್)  ಭರ್ಜರಿ ಬೌಲಿಂಗ್ ನೆರವಿನಿಂದ ಭಾರತ 3 ನೇ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಿದೆ.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ದುಕೊಂಡಿದ್ದು, ಮೊದಲು ಬ್ಯಾಟಿಂಗ್ ನಡೆಸಿದ ಭಾರತದ ಪರವಾಗಿ ರೋಹಿತ್ ಶರ್ಮಾ 0, ಶಿಖರ್ ಧವನ್ 76, ವಿರಾಟ್ ಕೊಹ್ಲಿ ಅಜೇಯ 160, ಅಜಿಂಕ್ಯಾ ರೆಹಾನೆ 11, ಹಾರ್ದಿಕ್ ಪಾಂಡ್ಯ 14, ಎಂ.ಎಸ್. ಧೋನಿ 10, ಕೇದಾರ್ ಜಾಧವ್ 1, ಭುವನೇಶ್ವರ್ ಕುಮಾರ್ ಅಜೇಯ 16 ರನ್ ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪರವಾಗಿ ಕಗಿಸೊ ರಬಾಡ 1, ಕ್ರಿಸ್ ಮೊರಿಸ್ 1, ಆಂಡಿಲೆ ಫೆಲ್ಕುವಾಯೊ 1, ಇಮ್ರಾನ್ ತಾಹಿರ್ 1, ಜೆ.ಪಿ. ಡುಮಿನಿ 2 ವಿಕೆಟ್ ಪಡೆದಿದ್ದಾರೆ.

ವಿರಾಟ್ ಕೊಹ್ಲಿ ಭರ್ಜರಿ 160 ರನ್ ಗಳಿಸಿದ್ದು, ಏಕದಿನ ಕ್ರಿಕೆಟ್ ನಲ್ಲಿ 34 ನೇ ಶತಕವಾಗಿದೆ. ಭಾರತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 303 ರನ್ ಗಳಿಸಿದ್ದು, ದಕ್ಷಿಣ ಆಫ್ರಿಕಾ ಗೆಲುವಿಗೆ 304 ರನ್ ಗುರಿ ನೀಡಲಾಗಿತ್ತು.

ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್ ಸ್ಪಿನ್ ದಾಳಿಗೆ ದಕ್ಷಿಣ ಆಫ್ರಿಕಾ ತತ್ತರಿಸಿ 40 ಓವರ್ ಗಳಲ್ಲಿ 179 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಏಡನ್ ಮರ್ಕ್ರಮ್ 32, ಜೆ.ಪಿ. ಡುಮಿನಿ 51, ಡೇವಿಡ್ ಮಿಲ್ಲರ್ 25 ರನ್ ಗಳಿಸಿದ್ದಾರೆ. ಭಾರತದ ಪರ ಯಜುವೇಂದ್ರ ಚಾಹಲ್ 4, ಕುಲದೀಪ್ ಯಾದವ್ 4, ಜಸ್ ಪ್ರೀತ್ ಬೂಮ್ರಾ 2 ವಿಕೆಟ್ ಪಡೆದು

ದಕ್ಷಿಣ ಆಫ್ರಿಕಾದಲ್ಲಿ ಭಾರತ ಸತತವಾಗಿ 3 ಏಕದಿನ ಪಂದ್ಯಗಳನ್ನು ಗೆದ್ದ ಇತಿಹಾಸವಿರಲಿಲ್ಲ. 3 ನೇ ಏಕದಿನ ಪಂದ್ಯವನ್ನು ಜಯಿಸುವ ಮೂಲಕ ಭಾರತ ಇತಿಹಾಸ ನಿರ್ಮಿಸಿದೆ.

ಭಾರತ ತಂಡ ಎರಡೂವರೆ ದಶಕಗಳಿಂದ ಒಂದು ಏಕದಿನ ಸರಣಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಗೆದ್ದಿಲ್ಲ. ಈ ಬಾರಿ 3 -0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಉಳಿದ 3 ಪಂದ್ಯಗಳಲ್ಲಿ 1 ಪಂದ್ಯ ಗೆದ್ದರೂ ಸರಣಿ ಭಾರತದ ಪಾಲಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...