alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಮ್ ಇಂಡಿಯಾ ನಾಯಕ ಧೋನಿಗೆ ಫೈನ್

ms-dhoniವಿಶ್ವ ಕಪ್ ಟಿ 20 ಯಲ್ಲಿ ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯದಲ್ಲಿ ಭಾರತ ತಂಡ ಪರಾಭವಗೊಳ್ಳುವ ಮೂಲಕ ಫೈನಲ್ ನಿಂದ ಹೊರ ಬಿದ್ದಿದೆ. ಇದರಿಂದಾಗಿ ಕ್ರಿಕೆಟ್ ಪ್ರೇಮಿಗಳು ಆಪಾರ ನಿರಾಸೆ ಅನುಭವಿಸಿದ್ದಾರೆ. ಈ ಮಧ್ಯೆ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರಿಗೆ ಫೈನ್ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಆದರೆ ಧೋನಿಯವರಿಗೆ ದಂಡ ವಿಧಿಸಿರುವುದು ಕ್ರಿಕೆಟ್ ಕಾರಣಕ್ಕಾಗಿ ಅಲ್ಲ. ಬದಲಾಗಿ ಅವರ ದುಬಾರಿ ಬೆಲೆಯ ಐಷಾರಾಮಿ ಹಮ್ಮರ್ ವಾಹನದ ನೋಂದಣಿಯಲ್ಲಿನ ಲೋಪಕ್ಕಾಗಿ ಈ ದಂಡ ವಿಧಿಸಲಾಗಿದೆ.

ಬೈಕ್ ಹಾಗೂ ಕಾರ್ ಗಳ ಕ್ರೇಜ್ ಹೊಂದಿರುವ ಧೋನಿ ದುಬಾರಿ ಬೆಲೆಯ ಹಲವಾರು ವಾಹನಗಳನ್ನು ಹೊಂದಿದ್ದಾರೆ. ಈ ಪೈಕಿ ‘ಹಮ್ಮರ್’ ವಾಹನವನ್ನು ‘ಸ್ಕಾರ್ಪಿಯೋ’ ಎಂದು ನೋಂದಣಿ ಮಾಡಿ ಅದಕ್ಕೆ ತಕ್ಕ ಶುಲ್ಕ ಪಡೆಯಲಾಗಿದೆ. ಆದರೆ ಸ್ಕಾರ್ಪಿಯೋಗಿಂತ ಹಮ್ಮರ್ ಬೆಲೆ ಮೂರಕ್ಕೂ ಅಧಿಕ ಪಟ್ಟು ಹೆಚ್ಚಾಗಿದ್ದು, ಕಂಪ್ಯೂಟರ್ ನಲ್ಲಿ ಲೋಪವಾಗಿರುವ ಕಾರಣ ಈ ಪ್ರಮಾದವಾಗಿದೆ ಎಂದಿರುವ ರಾಂಚಿ ಸಾರಿಗೆ ಅಧಿಕಾರಿಗಳು ಈಗ ಧೋನಿಯವರಿಗೆ 1.59 ಲಕ್ಷ ರೂ. ದಂಡ ವಿಧಿಸಿ ಆದ ಲೋಪವನ್ನು ಸರಿಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...