alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ವನಿತೆಯರ ಎದುರು ಪಾಕ್ ಧೂಳೀಪಟ

crickt-mahila-tandaaa

ಡರ್ಬಿ: ಇಲ್ಲಿನ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಐ.ಸಿ.ಸಿ. ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವನಿತೆಯರು ಪಾಕಿಸ್ತಾನ ತಂಡವನ್ನು ಬಗ್ಗುಬಡಿದಿದ್ದಾರೆ.

ಎಕ್ತಾ ಬಿಶ್ತ್ ದಾಳಿಗೆ(5 ವಿಕೆಟ್) ತತ್ತರಿಸಿದ ಪಾಕ್ ಹೀನಾಯ ಸೋಲು ಕಂಡಿದೆ. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಮಿಥಾಲಿ ಪಡೆ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿತು.

ಭಾರತ ತಂಡದ ಪರವಾಗಿ ಪೂನಂ ರಾವತ್ 47, ಸ್ಮೃತಿ ಮಂಧಾನಾ 2, ದೀಪ್ತಿ ಶರ್ಮಾ 28, ಮಿಥಾಲಿ ರಾಜ್ 8, ಹರ್ಮನ್ ಪ್ರೀತ್ ಕೌರ್ 10, ಮೌನ ಮೇಶರಾಮ್ 6, ಸುಷ್ಮಾ ದೇವಿ 33, ಜೂಲನ್ ಗೋಸ್ವಾಮಿ 14, ಮಾನಸಿ ಜೋಶಿ ಅಜೇಯ 4, ಎಕ್ತಾ ಬಿಶ್ತ್ 1 ಪೂನಂ ಅಜೇಯ 6 ರನ್ ಗಳಿಸಿದ್ದಾರೆ.

ಪಾಕ್ ಪರವಾಗಿ ನಶ್ರಾ ಸಂಧು 4 ವಿಕೆಟ್ ಪಡೆದು ಗಮನ ಸೆಳೆದರು. 170 ಗೆಲುವಿನ ಗುರಿ ಪಡೆದ ಪಾಕಿಸ್ತಾನದ ಪರವಾಗಿ ಆಯೇಷಾ ಜಾಫರ್ 1, ನಹೀದಾ ಖಾನ್ 23, ಜವೇರಿಯಾ ವಾದೂದ್ 6, ಸಿದ್ರಾ ನವಾಜ್ 0, ಇರಾಮ್ ಜಾವೇದ್ 0, ಸಯಿದಾ ಅಬೀದಿ 5, ಅಮೈವಾ ಕೋಖರ್ 0, ಸನಾ ಮಿರ್ 29, ನಶ್ರಾ ಸಂಧು 1, ದೈನಾ ಬೇಗ್ 0, ಸಾದಿಯಾ ಯೂಸುಫ್ 3 ರನ್ ಗಳಿಸಿದ್ದಾರೆ.

ಪಾಕ್ ತಂಡ ಯಾವ ಹಂತದಲ್ಲೂ ಪ್ರತಿರೋಧ ತೋರಲೇ ಇಲ್ಲ. ಆರಂಭದಿಂದಲೂ ಮುಗ್ಗರಿಸಿದ ಪಾಕ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 36 ರನ್ ಗಳಿಸಿ ಹೀನಾಯ ಸ್ಥಿತಿಯಲ್ಲಿತ್ತು. ಸನಾ ಮೀರ್ ಒಬ್ಬರೇ ಪ್ರತಿರೋಧ ತೋರಿದ್ದಾರೆ.

ಭಾರತದ ಪರವಾಗಿ ಮಾರಕ ದಾಳಿ ನಡೆಸಿದ ಎಕ್ತಾ ಬಿಶ್ತ್ 5 ವಿಕೆಟ್ ಪಡೆದರು. ಜೂಲನ್ ಗೋಸ್ವಾಮಿ 1, ದೀಪ್ತಿ ಶರ್ಮ 1, ಮಾನಸಿ ಜೋಶಿ 2, ಹರ್ಮನ್ ಪ್ರೀತ್ ಕೌರ್ 1 ವಿಕೆಟ್ ಪಡೆದರು.

ಅಂತಿಮವಾಗಿ ಪಾಕ್ ತಂಡ 38.1 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 74 ರನ್ ಗಳಿಸಿ ಹೀನಾಯ ಸೋಲು ಕಂಡಿದೆ.

ಭಾರತ 169/9(50 ಓವರ್), ಪಾಕಿಸ್ತಾನ 74/10(38.1 ಓವರ್)

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...