alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯನ್ ಗೇಮ್ಸ್ ನಲ್ಲಿ ದಾಖಲೆ ಬರೆದ ಭಾರತ

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತ 15ನೇ ಬಂಗಾರ ಪದಕವನ್ನು ತನ್ನದಾಗಿಸಿಕೊಂಡಿದೆ. 49 ಕೆ.ಜಿ. ವಿಭಾಗದ ಪುರುಷರ ಬಾಕ್ಸಿಂಗ್ ವಿಭಾಗದಲ್ಲಿ ಅಮಿತ್ ಪಾಂಘಲ್ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಭಾರತ ಏಷ್ಯನ್ ಗೇಮ್ಸ್ ನಲ್ಲಿ ದಾಖಲೆಯ ಪದಕವನ್ನು ಬಾಚಿಕೊಂಡಿದೆ.

ಕಾಮನ್ ವೆಲ್ತ್ ನಲ್ಲಿ ಬೆಳ್ಳಿ ಪದಕ ವಿಜೇತ ಅಮಿತ್, ಫೈನಲ್ ಪಂದ್ಯದಲ್ಲಿ 3-2 ರಿಂದ ಫಿಲಿಪೈನ್ಸ್ ನ ಕಾರ್ಲೊ ಪಾಲಂರನ್ನು ಮಣಿಸಿ, ಸ್ವರ್ಣ ಪಡೆದು ಬೀಗಿದ್ರು.

ಸದ್ಯ ಭಾರತ 15 ಬಂಗಾರ, 23 ಬೆಳ್ಳಿ, 42 ಕಂಚನ್ನು ಬಾಚಿಕೊಂಡಿದ್ದು, 8ನೇ ಸ್ಥಾನದಲ್ಲಿದೆ. ಈ ಮೂಲಕ 2010 ರಲ್ಲಿ ಭಾರತ ಪಡೆದಿದ್ದ 65 ಪದಕದ ದಾಖಲೆಯನ್ನು ಅಳಿಸಿ ಹಾಕಿದೆ.

1951ರಲ್ಲಿ ದೆಹಲಿಯಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ನಲ್ಲಿ ಭಾರತ 15 ಬಂಗಾರದ ಪದಕ ಜಯಿಸಿದ ಸಾಧನೆಯನ್ನು ಈಗ ಸಮ ಮಾಡಿದೆ. ಪ್ರಸಕ್ತ ಏಷ್ಯನ್ ಗೇಮ್ಸ್ ನಲ್ಲಿ ಇನ್ನೊಂದು ಪದಕ ಪಡೆದಲ್ಲಿ, ಭಾರತ ಮತ್ತೊಂದು ದಾಖಲೆ ನಿರ್ಮಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...