alex Certify
ಕನ್ನಡ ದುನಿಯಾ       Mobile App
       

Kannada Duniya

ಶಹಬ್ಬಾಸ್ ವಿರಾಟ್…! ದ.ಆಫ್ರಿಕಾ ಮಣಿಸಿ ದಾಖಲೆ ಮೇಲೆ ದಾಖಲೆ

ವಿರಾಟ್ ಬ್ರಿಗೇಡ್ ದಕ್ಷಿಣ ಆಫ್ರಿಕಾ ನೆಲದಲ್ಲಿ ಇತಿಹಾಸ ಬರೆದಿದೆ. ನಾಲ್ಕನೇ ಏಕದಿನ ಪಂದ್ಯದಲ್ಲಿ ಜಯಭೇರಿ ಬಾರಿಸಿ ಸರಣಿಯನ್ನು ಟೀಂ ಇಂಡಿಯಾ ಕೈವಶ ಮಾಡಿಕೊಂಡಿದೆ. 26 ವರ್ಷಗಳ ನಂತ್ರ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಗೆದ್ದು ಇತಿಹಾಸ ಬರೆದ ಟೀಂ ಇಂಡಿಯಾ ಇನ್ನೊಂದು ದಾಖಲೆ ಬರೆದಿದೆ.

ಪೋರ್ಟ್ ಎಲಿಜಬೆತ್ ನಲ್ಲಿ ಈವರೆಗೂ ಟೀಂ ಇಂಡಿಯಾ ಒಂದೂ ಪಂದ್ಯವನ್ನು ಗೆದ್ದಿರಲಿಲ್ಲ. ಫೆಬ್ರವರಿ 13ರಂದು ಕೊಹ್ಲಿ ಪಡೆ ಈ ದಾಖಲೆಯನ್ನೂ ಮುರಿದಿದೆ. ಪೋರ್ಟ್ ಎಲಿಜಬೆತ್ ನಲ್ಲಿ ದಕ್ಷಿಣ ಆಫ್ರಿಕಾ ಮಣಿಸಿ ಸರಣಿ ತನ್ನದಾಗಿಸಿಕೊಂಡಿದೆ. 1992ರಲ್ಲಿ ಮೊಹಮ್ಮದ್ ಅಜರುದ್ದೀನ್ ರಿಂದ ಹಿಡಿದು ಧೋನಿಯವರೆಗೆ ಯಾವ ನಾಯಕರೂ ಮಾಡದ ಸಾಧನೆಯನ್ನು ನಾಯಕ ಕೊಹ್ಲಿ ಮಾಡಿ ತೋರಿಸಿದ್ದಾರೆ.

ಇಷ್ಟೇ ಅಲ್ಲ ಸತತ 9 ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿರುವ ಕೊಹ್ಲಿ ಬಳಗ, ಆಸ್ಟ್ರೇಲಿಯಾ ದಾಖಲೆಯನ್ನು ಸರಿಗಟ್ಟಿದೆ. ಸತತ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಮೊದಲ ಸ್ಥಾನದಲ್ಲಿದೆ. ಈವರೆಗೆ 15 ಸರಣಿಯನ್ನು ವೆಸ್ಟ್ ಇಂಡೀಸ್ ಗೆದ್ದಿದೆ. ನಂತ್ರದ ಸ್ಥಾನ ಆಸ್ಟ್ರೇಲಿಯಾ ಬಳಿಯಿತ್ತು. ಆಸ್ಟ್ರೇಲಿಯಾ 8 ಸರಣಿ ಗೆದ್ದಿದೆ. ಆದ್ರೆ ಆಸ್ಟ್ರೇಲಿಯಾ ಬದಿಗಟ್ಟಿರುವ ಕೊಹ್ಲಿ ಬಳಗ ಎರಡನೇ ಸ್ಥಾನಕ್ಕೇರಿದೆ. ಸತತ 9 ಸರಣಿ ಗೆದ್ದು ಬೀಗಿದೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...