alex Certify
ಕನ್ನಡ ದುನಿಯಾ       Mobile App
       

Kannada Duniya

ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲೇ ‘ಟೀಂ ಇಂಡಿಯಾ’ಗೆ ಸೋಲು

ಶ್ರೀಲಂಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 5 ವಿಕೆಟ್ ಗಳ ಸೋಲು ಅನುಭವಿಸಿದೆ. ಭರ್ಜರಿ ಗೆಲುವಿನೊಂದಿಗೆ ಶ್ರೀಲಂಕಾ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.

ಉತ್ತಮ ಬ್ಯಾಟಿಂಗ್ ಮಾಡಿದ ಕುಸಾಲ್ ಪರೇರಾ ಕೇವಲ 37 ಎಸೆತಗಳಲ್ಲಿ 66 ರನ್ ಗಳಿಸುವ ಮೂಲಕ ಲಂಕಾ ಗೆಲುವಿನ ರೂವಾರಿ ಎನಿಸಿಕೊಂಡರು.  ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಶ್ರೀಲಂಕಾ ಗೆಲುವಿಗೆ 175 ರನ್‌ಗಳ ಗೆಲುವಿನ ಗುರಿ ನೀಡಿತ್ತು.

ಟೀಂ ಇಂಡಿಯಾ ಪರ ಬಿರುಸಿನ ಬ್ಯಾಟಿಂಗ್ ಮಾಡಿದ ಶಿಖರ್ ಧವನ್ 90 ರನ್ ಗಳಿಸಿದ್ರು. ನಾಯಕ ರೋಹಿತ್ ಶರ್ಮಾ ಸೊನ್ನೆ ಸುತ್ತಿದ್ರೆ, ರೈನಾ ಕೇವಲ 1 ರನ್ ಗಳಿಸಿ ಔಟಾದ್ರು. ಧವನ್ ಗೆ ಸಾಥ್ ನೀಡಿದ ಮನೀಶ್ ಪಾಂಡೆ ಜವಾಬ್ಧಾರಿಯುತ ಬ್ಯಾಟಿಂಗ್ ಮಾಡಿದ್ರು.

37 ರನ್ ಗಳಿಸಿ ಔಟಾದ್ರು. ಕೇವಲ 49 ಬಾಲ್ ಗಳಲ್ಲಿ ಧವನ್ 90 ರನ್ ಸಿಡಿಸಿದ್ರೆ, ಕೊನೆಯಲ್ಲಿ ರಿಷಬ್ ಪಂಥ್ 23 ರನ್ ಕಲೆಹಾಕಿದ್ರು. ಸಾಧಾರಣ ಮೊತ್ತ ಬೆನ್ನಟ್ಟಿದ ಶ್ರೀಲಂಕಾ ಸಂಘಟಿತ ಆಟದ ಮೂಲಕ ಸುಲಭ ಜಯ ದಾಖಲಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...