alex Certify
ಕನ್ನಡ ದುನಿಯಾ       Mobile App
       

Kannada Duniya

ದ.ಆಫ್ರಿಕಾ ತಂಡದ ಬಸ್ ಚಾಲಕ ಟೀಂ ಇಂಡಿಯಾ ಪರ

ಟೀಂ ಇಂಡಿಯಾ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಈ ಪ್ರವಾಸ ಭಾರತಕ್ಕೆ ವಿಶೇಷವಾಗೇನೂ ಇಲ್ಲ. ಈಗಾಗಲೇ ಎರಡು ಟೆಸ್ಟ್ ಸೋತು ಟೀಂ ಇಂಡಿಯಾ ಸರಣಿ ಕೈಚೆಲ್ಲಿದೆ. ಆದ್ರೆ ಭಾರತ ಮುಂದಿನ ಪಂದ್ಯದಲ್ಲಾದ್ರೂ ಗೆಲುವು ಸಾಧಿಸಲಿ ಎಂಬುದು ಎಲ್ಲರ ಆಸೆ. ವಿಶೇಷವಾಗಿ ದಕ್ಷಿಣ ಆಫ್ರಿಕಾ ತಂಡದ ಬಸ್ ಚಾಲಕನಾಗಿ ಕೆಲಸ ಮಾಡುತ್ತಿರುವ ಆಂಡ್ರೆ ಕ್ರೋಗ್ ಇದನ್ನೇ ಬಯಸುತ್ತಿದ್ದಾರೆ.

ಆಂಡ್ರೆ ಕ್ರೋಗ್ ದಕ್ಷಿಣ ಆಫ್ರಿಕಾ ತಂಡದ ಬಸ್ ಚಾಲಕನಾಗಿದ್ದರೂ ಟೀಂ ಇಂಡಿಯಾ ಅಭಿಮಾನಿ. ಸೆಂಚುರಿಯನ್ ನಲ್ಲಿ ಟೀಂ ಇಂಡಿಯಾ ಪರ ಮಾತನಾಡಿದ್ದಾರೆ ಆಂಡ್ರೆ. ಈ ಹಿಂದೆ ಟೀಂ ಇಂಡಿಯಾ ಆಂಡ್ರೆಗೆ ಸಹಾಯ ಮಾಡಿತ್ತಂತೆ. ಇದನ್ನು ನೆನಪಿಟ್ಟುಕೊಂಡಿರುವ ಆಂಡ್ರೆ ನಾನು ಇಂಡಿಯಾ ಅಭಿಮಾನಿ ಎನ್ನುತ್ತಾರೆ.

ಟೀಂ ಇಂಡಿಯಾ ಆಂಡ್ರೆಗೆ ಕುಡಿಯುವ ನೀರು ಹಾಗೂ ಪಂದ್ಯದ ಟಿಕೆಟ್ ನೀಡಿತ್ತಂತೆ. ಆ ನಂತ್ರ ಟೀಂ ಇಂಡಿಯಾ ಅಭಿಮಾನಿಯಾಗಿದ್ದಾರಂತೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಬಗ್ಗೆ ದೂರಿರುವ ಆಂಡ್ರೆ, ಅಧಿಕಾರಿಗಳು ನನ್ನನ್ನು ಮನುಷ್ಯರಂತೆ ನೋಡುವುದಿಲ್ಲ. ನಾನು ಬಸ್ ಚಾಲಕ ಅಷ್ಟೆ. ತಂಡದ ಒಂದು ಭಾಗವಲ್ಲ ಎಂದಿದ್ದಾರೆ. ಅಲ್ಲಿನ ಅಧಿಕಾರಿಯೊಬ್ಬರು ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಆದ್ರೆ ಭಾರತೀಯ ಆಟಗಾರರು ಅವರ ಬಸ್ ಚಾಲಕನನ್ನು ಪ್ರೀತಿಯಿಂದ ನೋಡುತ್ತಾರೆಂದು ಆಂಡ್ರೆ ಹೇಳಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...