alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾ ಬಗ್ಗೆ ಮೆಚ್ಚುಗೆಯ ಮಾತನಾಡಿದ ಅನಿಲ್ ಕುಂಬ್ಳೆ

ಇಂಗ್ಲೆಂಡ್ ಪ್ರವಾಸದ ವೇಳೆ ಭಾರತೀಯ ಸ್ಪಿನ್ನರ್ ಗಳು ಬಹುಮುಖ್ಯ ಪಾತ್ರ ವಹಿಸಲಿದ್ದಾರೆಂದು ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಹೇಳಿದ್ದಾರೆ. ಐಸಿಸಿ ವೆಬ್ ಸೈಟ್ ವರದಿ ಪ್ರಕಾರ ಈ ವರ್ಷ ಆಗಸ್ಟ್ ಹಾಗೂ ಸೆಪ್ಟೆಂಬರ್ ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಐದು ಟೆಸ್ಟ್ ಸರಣಿಯನ್ನಾಡಲಿದೆ. ಇದು 18ನೇ ಇಂಗ್ಲೆಂಡ್ ಪ್ರವಾಸವಾಗಿದ್ದು, ಈವರೆಗೆ ಭಾರತ ಕೇವಲ 6 ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.

ಇಂಗ್ಲೆಂಡ್ ವಿರುದ್ಧ ಅತಿ ಕಡಿಮೆ ಗೆಲುವು ಸಾಧಿಸಿರುವ ಟೀಂ ಇಂಡಿಯಾಕ್ಕೆ ಈ ಬಾರಿ ಸ್ಪಿನ್ನರ್ ಗಳು ಅಸ್ತ್ರವೆಂದು ಕುಂಬ್ಳೆ ಹೇಳಿದ್ದಾರೆ. ವಿಶ್ವದ ಅತ್ಯುತ್ತಮ ಸ್ಪಿನ್ನರ್ ಹಾಗೂ ಬ್ಯಾಟ್ಸ್ ಮೆನ್ ಗಳು ಟೀಂ ಇಂಡಿಯಾದಲ್ಲಿದ್ದಾರೆಂದು ಕುಂಬ್ಳೆ ಹೇಳಿದ್ದಾರೆ. ಅತ್ಯುತ್ತಮ ಆಲ್ ರೌಂಡರ್ ತಂಡ ನಮ್ಮಲ್ಲಿದೆ. ಬೌಲಿಂಗ್ ನಲ್ಲಿ ಅನುಭವ ಹೊಂದಿರುವ ಹಾಗೂ 20ಕ್ಕೂ ಹೆಚ್ಚು ವಿಕೆಟ್ ಕಬಳಿಸುವ ಸಾಮರ್ಥ್ಯವುಳ್ಳ ಆಟಗಾರರು ತಂಡದಲ್ಲಿದ್ದಾರೆಂದು ಕುಂಬ್ಳೆ ಹೇಳಿದ್ದಾರೆ.

ನಮ್ಮ ಆಟಗಾರರು 50ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಮೊದಲ ಬಾರಿಗೆ ಇಂಗ್ಲೆಂಡ್ ಪ್ರವಾಸಕ್ಕೆ ಹೋಗ್ತಿಲ್ಲ. ಅಲ್ಲಿನ ಪರಿಸ್ಥಿತಿ ತಿಳಿದಿರುವ ಆಟಗಾರರೇ ತಂಡದಲ್ಲಿದ್ದಾರೆ ಎನ್ನುವ ಮೂಲಕ ಇಂಗ್ಲೆಂಡ್ ಪ್ರವಾಸ ಯಶಸ್ವಿಯಾಗಲಿದೆ ಎಂಬ ವಿಶ್ವಾಸವನ್ನು ಕುಂಬ್ಳೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...