alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಸ್ಟ್ ಗೆ ಪಾದಾರ್ಪಣೆ ಮಾಡ್ತಾರಾ ಸಚಿನ್ ದಾಖಲೆ ಮುರಿದ ವೀರ…!

ಶುಕ್ರವಾರ ಓವಲ್ ಅಂಗಳದಲ್ಲಿ ಇಂಗ್ಲೆಂಡ್ ಪ್ರವಾಸದ ಕೊನೆಯ ಟೆಸ್ಟ್ ಪಂದ್ಯ ಆಡೋಕೆ ಟೀಮ್ ಇಂಡಿಯಾ ಕಣಕ್ಕೆ ಇಳಿಯಲಿದೆ. ಈ ಪಂದ್ಯದಲ್ಲಿ ಕೊಹ್ಲಿ ಪಡೆ ಬದಲಾವಣೆ ಮಾಡುವ ಸಾಧ್ಯತೆ ಇದ್ದು, ಸಚಿನ್ ತೆಂಡೂಲ್ಕರ್ ದಾಖಲೆ ಅಳಿಸಿದ ಆಟಗಾರ, ಆಡುವ 11 ರ ಬಳಗದಲ್ಲಿ ಸ್ಥಾನ ಲಭಿಸುವ ಸಾಧ್ಯತೆ ಇದೆ.

ಕಳಪೆ ಫಾರ್ಮ್ ನಿಂದ ಕಂಗೆಟ್ಟ ಟೀಮ್ ಇಂಡಿಯಾ ಓಪನರ್ಸ್ ಟೆಸ್ಟ್ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಶಿಖರ್ ಧವನ್ ಹಾಗೂ ಕೆ.ಎಲ್. ರಾಹುಲ್ ಕಳಪೆ ಫಾರ್ಮ್ ನಿಂದ ಬಳಲುತ್ತಿರೋದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಈ ಹಿನ್ನೆಯಲ್ಲಿ ಈ ಇಬ್ಬರ ಬದಲಿಗೆ ತಂಡದಲ್ಲಿ ಅಂಡರ್ 11 ಕ್ಯಾಪ್ಟನ್ ಪೃಥ್ವಿ ಶಾಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಐದನೇ ಟೆಸ್ಟ್ ನಲ್ಲಿ ಒಂದು ವೇಳೆ ಪೃಥ್ವಿ ಶಾಗೆ ಅವಕಾಶ ಲಭಿಸಿದ್ದೇ ಆದಲ್ಲಿ, ರನ್ ಗುಡ್ಡೆ ಹಾಕಲು ಮುಂಬೈಕರ್ ಪ್ಲಾನ್ ಮಾಡಿಕೊಂಡಿದ್ದಾರೆ. ದೇಶಿಯ ಹಾಗೂ ಹಲವು ವಯೋಮಿತಿ ಟೂರ್ನಿಯಲ್ಲಿ ಮಿಂಚಿರುವ ಪೃಥ್ವಿ ಐದನೇ ಟೆಸ್ಟ್ ನಲ್ಲಿ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ.

ಶಾಲಾ ದಿನಗಳಲ್ಲಿ ಹ್ಯಾರೀಸ್ ಶೀಲ್ಡ್ ಕ್ರಿಕೆಟ್ ಟೂರ್ನಿಯ ವೇಳೆ 330 ಎಸೆತಗಳಲ್ಲಿ 546 ರನ್ ಬಾರಿಸಿ, ಸಚಿನ್ ದಾಖಲೆಯನ್ನು ಅಳಿಸಿ ಹಾಕಿದ್ದ ಪೃಥ್ವಿ ಸುದ್ದಿಯಾಗಿದ್ದರು. ಇನ್ನು ಪೃಥ್ವಿ ಶಾ, ಇಂಗ್ಲೆಂಡ್ ಪ್ರವಾಸದ ತ್ರಿಕೋನ ಸರಣಿಯಲ್ಲಿ 151 ರನ್ ಗಳಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...