alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಕಿಯಲ್ಲಿ ಪಾಕ್ ಬಗ್ಗು ಬಡಿದ ಭಾರತಕ್ಕೆ ಟ್ರೋಫಿ

indian-hockey-team

ಮಲೇಷ್ಯಾದಲ್ಲಿ ನಡೆದ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗು ಬಡಿದು ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಭಾರೀ ಕುತೂಹಲ ಮೂಡಿಸಿದ್ದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತ 3-2 ಗೋಲುಗಳ ಅಂತರದಿಂದ ಜಯ ಗಳಿಸಿದೆ. ಭಾರತದ ಪರವಾಗಿ ಅಮೋಘ ಪ್ರದರ್ಶನ ನೀಡಿದ ರೂಪೀಂದರ್ ಪಾಲ್ ಸಿಂಗ್, ಸರ್ದಾರ್ ಸಿಂಗ್ ಮತ್ತು ನಿತಿನ್ ತಿಮ್ಮಯ್ಯ ಗೋಲು ಗಳಿಸಿ ಗಮನ ಸೆಳೆದರು. ಫೈನಲ್ ಪಂದ್ಯದಲ್ಲಿ ವಿಜಯದ ಗೋಲನ್ನು ಕೊಡಗಿನ ಕುವರ ನಿತಿನ್ ತಿಮ್ಮಯ್ಯ ಗಳಿಸಿದ್ದು ವಿಶೇಷವಾಗಿತ್ತು.

ಟೂರ್ನಿಯ ಲೀಗ್ ನಲ್ಲಿ ಪಾಕಿಸ್ತಾನ ವಿರುದ್ಧ ಜಯಗಳಿಸಿದ್ದ ಭಾರತ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭರ್ಜರಿ ಜಯಗಳಿಸಿ, ಫೈನಲ್ ಪ್ರವೇಶಿತ್ತು. ಫೈನಲ್ ಪಂದ್ಯದಲ್ಲಿ ಪಾಕ್ ಬಗ್ಗು ಬಡಿದು, ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...