alex Certify
ಕನ್ನಡ ದುನಿಯಾ       Mobile App
       

Kannada Duniya

ಇರಾನ್ ವಿರುದ್ಧ ತೊಡೆ ತಟ್ಟಿ ಗೆದ್ದ ಭಾರತದ ಕಬಡ್ಡಿ ಮಾಸ್ಟರ್ಸ್

ಭಾರತದ ಕಬ್ಬಡಿ ತಂಡ ಮತ್ತೊಂದು ಅಂತಾರಾಷ್ಟ್ರೀಯ ವಿಕ್ರಮ ಮೆರೆದಿದೆ. ದುಬೈನಲ್ಲಿ ನಡೆದ ಕಬ್ಬಡ್ಡಿ ಮಾಸ್ಟರ್ಸ್ ಫೈನಲ್ ಪಂದ್ಯದಲ್ಲಿ ಬಲಿಷ್ಟ ಇರಾನ್ ನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 44- 26 ಅಂಕಗಳ ಮೂಲಕ ಆರು ರಾಷ್ಟ್ರಗಳ ಮಾಸ್ಟರ್ಸ್ ಕಬಡ್ಡಿ ಟೈಟಲ್ ತನ್ನದಾಗಿಸಿಕೊಂಡ ಭಾರತೀಯ ಆಟಗಾರರು ಹೆಮ್ಮೆಯಿಂದ ತೊಡೆ ತಟ್ಟಿದ್ದಾರೆ.

ಯಾವುದೇ ಹಂತದಲ್ಲೂ ಇರಾನ್, ಭಾರತದ ಆಟಕ್ಕೆ ಪೈಪೋಟಿ ನೀಡದೆ ಸೋಲೊಪ್ಪಿಕೊಂಡಿದೆ. ಕ್ಯಾಪ್ಟನ್ ಅಜಯ್ ಠಾಕೂರ್ ಮತ್ತು ತಂಡದ ಯುವ ಆಟಗಾರ ಮೋನು ಗೊಯಾಟ್ ಭಾರತದ ಗೆಲುವನ್ನ ನಿಶ್ಚಯಿಸುವ ಆಟವನ್ನಾಡಿದರು. ಅಜಯ್ ಠಾಕೂರ್ 9 ಅಂಕ ಮತ್ತು ಮೋನು 6 ಅಂಕ ಗಳಿಸಿ ತಂಡಕ್ಕೆ ಗೆಲುವನ್ನ ದಕ್ಕಿಸಿಕೊಟ್ಟರು. ಅತ್ಯುದ್ಭುತ ಡಿಫೆಂಡರ್ ಆಟವಾಡಿದ ಸುರ್ಜಿತ್ ಸಿಂಗ್ ಟ್ಯಾಕಲ್ನಲ್ಲಿ 7 ಅಂಕಗಳನ್ನ ಭಾರತಕ್ಕೆ ತಂದುಕೊಟ್ಟರು.

ಭಾರತ ಮತ್ತು ಇರಾನ್ ನಡುವಿನ ಕಬಡ್ಡಿ ಪಂದ್ಯ ಹಲವು ರೋಚಕ ಕ್ಷಣಗಳಿಗೂ ಸಾಕ್ಷಿಯಾಯ್ತು. ಎರಡು ಬಾರಿ ಇರಾನ್ ಆಟಗಾರರನ್ನ ಭಾರತದ ಆಟಗಾರರು ಆಲ್ಔಟ್ ಮಾಡಿ ಚಾಂಪಿಯನ್ನರ ಘನತೆಯ ಆಟವಾಡಿದ್ರು. ಪಂದ್ಯದ ಪ್ರಥಮಾರ್ಧದಲ್ಲಿ 10 ನಿಮಿಷಗಳ ಕಾಲ ವಿದ್ಯುತ್ ಅಡಚಣೆಯುಂಟಾಯಿತು. ಹಾಗಿದ್ದರು ಭಾರತಕ್ಕೆ ಗೆಲುವಿನ ಉಡುಗೊರೆ ಸಿಕ್ಕಿದೆ.

ದ್ವಿತೀಯಾರ್ಧದಲ್ಲಿ ಭಾರತದ ಡಿಫೆನ್ಸೀವ್ ಆಟವನ್ನ ಒರಟು ಆಟ ಅಂತ ಬಿಂಬಿಸೋಕೆ ಹೊರಟ ಇರಾನ್ ಕ್ಯಾಪ್ಟನ್ ಮನವಿಯನ್ನ ರೆಫರಿ ತಿರಸ್ಕರಿಸಿದ್ರು. ಉಭಯ ತಂಡಗಳು ಈ ಹಿಂದೆ ಅಹ್ಮಬಾದಾದ್ ನಲ್ಲಿ ನಡೆದ 2016ರ ಕಬಡ್ಡಿ ವಿಶ್ವಕಪ್ ಫೈನಲ್ ಹಣಾಹಣಿಯಲ್ಲಿ ಎದುರಾದ ನಂತರ ಕಬಡ್ಡಿ ಮಾಸ್ಟರ್ಸ್ ಟೈಟಲ್ ಗಾಗಿ ಮುಖಾಮುಖಿಯಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...