alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಡರ್ 19 ವಿಶ್ವಕಪ್ ಫೈನಲ್: ರಾಹುಲ್ ಗರಡಿಯ ಕಲಿಗಳು ರೆಡಿ

ಮೌಂಟ್ ಮೌಂಗನ್ಯೂಯಿ: ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಅಜೇಯ ನಾಗಾಲೋಟ ಮುಂದುವರೆಸಿರುವ ಪೃಥ್ವಿ ಶಾ ನೇತೃತ್ವದ ಟೀಂ ಇಂಡಿಯಾ, ಅಂಡರ್ 19 ವಿಶ್ವಕಪ್ ಗೆಲ್ಲಲು ಸಜ್ಜಾಗಿದೆ.

ಮೌಂಟ್ ಮೌಂಗನ್ಯೂಯಿಯ ಬೇ ಓವಲ್ ಮೈದಾನದಲ್ಲಿ ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳು ತಲಾ 3 ಸಲ ಚಾಂಪಿಯನ್ ಆಗಿದ್ದು, ನಾಳಿನ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.

ಈ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸೀಸ್ ವಿರುದ್ಧ 100 ರನ್ ಅಂತರದಿಂದ ಜಯಗಳಿಸಿದ್ದ ಭಾರತ, ನಂತರದಲ್ಲಿ ಕ್ರಿಕೆಟ್ ಶಿಶುಗಳಾದ ಪಪುವಾ ನ್ಯೂಗಿನಿ ವಿರುದ್ಧ 10 ವಿಕೆಟ್ ಅಂತರದಿಂದ ಜಯಗಳಿಸಿತ್ತು. ಜಿಂಬಾಬ್ವೆ 10 ವಿಕೆಟ್ ಹಾಗೂ ಬಾಂಗ್ಲಾ ವಿರುದ್ಧ 131 ರನ್ ಅಂತರದಿಂದ ಜಯಗಳಿಸಿತ್ತು.

ಸೆಮಿಫೈನಲ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 203 ರನ್ ಗಳ ಅಂತರದಿಂದ ಭರ್ಜರಿ ಜಯಗಳಿಸಿತ್ತು. ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿರುವ ಭಾರತ ತಂಡ 4 ನೇ ಸಲ ವಿಶ್ವಕಪ್ ಎತ್ತಿ ಹಿಡಿಯಲು ಸಜ್ಜಾಗಿದೆ.

ರಾಹುಲ್ ಗರಡಿಯಲ್ಲಿ ಪಳಗಿದ ಪೃಥ್ವಿ ಶಾ ಬಳಗ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪರ್ ಫಾರ್ಮೆನ್ಸ್ ನೀಡ್ತಿದ್ದು, ಫೈನಲ್ ಪಂದ್ಯ ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...