alex Certify
ಕನ್ನಡ ದುನಿಯಾ       Mobile App
       

Kannada Duniya

ಕುಸ್ತಿಯಲ್ಲಿ ಚಿನ್ನ ಗೆದ್ದ ಭಾರತದ ಸುಶೀಲ್ ಕುಮಾರ್

ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಗೇಮ್ಸ್ ನಲ್ಲಿ 74 ಕೆಜಿ ವಿಭಾಗದ ಪುರುಷರ ಕುಸ್ತಿ ಪಂದ್ಯದಲ್ಲಿ ಭಾರತದ ಸುಶೀಲ್ ಕುಮಾರ್ ಚಿನ್ನದ ಪದಕ ಗೆದ್ದಿದ್ದಾರೆ. ಫೈನಲ್ ನಲ್ಲಿ ಸುಶೀಲ್ ಕುಮಾರ್, ದಕ್ಷಿಣ ಆಫ್ರಿಕಾದ ಜೋಹಾನ್ನಸ್ ಬೋಥಾರನ್ನು ಮಣಿಸಿದ್ರು.

ಆಸ್ಟ್ರೇಲಿಯಾದ ಕೊನ್ನೊರ್ ಎವಾನ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಸುಶೀಲ್ ಕುಮಾರ್ ಸೆಮಿ ಫೈನಲ್ ತಲುಪಿದ್ದರು. ಕ್ವಾರ್ಟರ್ ಫೈನಲ್ ನಲ್ಲಿ ಕೆನಡಾದ ಜೆವೊನ್ ಬಾಲ್ಫೋರ್ ಗೆ ಸೋಲುಣಿಸಿದ್ದರು.

ಸೆಮಿಫೈನಲ್ ಕಾದಾಟದಲ್ಲಿ ಸುಶೀಲ್ ಕುಮಾರ್ ಗೆ ಪಾಕಿಸ್ತಾನದ ಕುಸ್ತಿಪಟು ಮುಹಮ್ಮದ್ ಅಸದ್ ಬಟ್ ಎದುರಾಗಿದ್ದು ವಿಶೇಷ. ಅವರನ್ನೂ ಕೂಡ ಸೋಲಿಸಿರೋ ಸುಶೀಲ್ ಕುಮಾರ್ ಮತ್ತೆ ಚಾಂಪಿಯನ್ ಎನಿಸಿಕೊಂಡಿದ್ದಾರೆ. 2014ರಲ್ಲೂ ಸುಶೀಲ್ 74 ಕೆಜಿ ವಿಭಾಗದಲ್ಲಿ ಸ್ವರ್ಣ ಗೆದ್ದಿದ್ದರು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...