alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಭೇಟಿಗಾಗಿ ಮೈದಾನಕ್ಕೆ ನುಗ್ಗಿದ ಅಭಿಮಾನಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅಭಿಮಾನಿಗಳ ಸಂಖ್ಯೆ ಎಷ್ಟಿದೆ? ಅವ್ರನ್ನು ಅಭಿಮಾನಿಗಳು ಎಷ್ಟು ಪ್ರೀತಿ ಮಾಡ್ತಾರೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೊಹ್ಲಿಯನ್ನು ಹತ್ತಿರದಿಂದ ನೋಡಲು ಅಭಿಮಾನಿಗಳು ಏನು ಮಾಡಲೂ ಸಿದ್ಧರಿರುತ್ತಾರೆ. ಇದಕ್ಕೆ ಹೈದ್ರಾಬಾದ್ ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಉತ್ತಮ ನಿದರ್ಶನ.

ಹೈದ್ರಾಬಾದ್ ಟೆಸ್ಟ್ ನ ಮೊದಲ ದಿನ ಅಭಿಮಾನಿಯೊಬ್ಬ ಕೊಹ್ಲಿ ಭೇಟಿಗಾಗಿ ಮೈದಾನಕ್ಕಿಳಿದಿದ್ದಾನೆ. ಕೊಹ್ಲಿಯನ್ನು ಅಪ್ಪಿಕೊಂಡಿದ್ದಲ್ಲದೆ ಕೊಹ್ಲಿ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ರಕ್ಷಣಾ ಸಿಬ್ಬಂದಿ ಅಭಿಮಾನಿಯನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ.

ರಾಜ್ಕೋಟಾ ಟೆಸ್ಟ್ ನಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ಕೊಹ್ಲಿ ಬ್ಯಾಟಿಂಗ್ ಮಾಡ್ತಿರುವಾಗ ಇಬ್ಬರು ಅಭಿಮಾನಿಗಳು ಮೈದಾನಕ್ಕೆ ಬಂದಿದ್ದರು. ನಂತ್ರ ರಕ್ಷಣಾ ಸಿಬ್ಬಂದಿ ಅವ್ರನ್ನು ಮೈದಾನದಿಂದ ಹೊರ ಹಾಕಿದ್ದರು. ಕೊಹ್ಲಿ ಭೇಟಿಗೆ ಹಾತೊರೆಯುವ ಅಭಿಮಾನಿಗಳು ರಕ್ಷಣಾ ತಡೆಗೋಡೆ ಮುರಿಯಲು ಸದಾ ಸಿದ್ಧರಿರುತ್ತಾರೆ. ಐಪಿಎಲ್ ನಲ್ಲಿ ಕೂಡ ಇಂಥ ಘಟನೆಗಳು ನಡೆಯುತ್ತಿರುತ್ತವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...