alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣಗಳಲ್ಲಿ ವೈರಲ್ ಆಗಿದೆ ಈ ಅದ್ಭುತ ಕ್ಯಾಚ್

ಹೈದರಾಬಾದ್ ನಲ್ಲಿ ನಡೆದ ಇಂಡಿಯಾ, ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯಾವಳಿಯಲ್ಲಿ ವೆಸ್ಟ್ ಇಂಡೀಸ್ ಭಾರತದ ಮುಂದೆ ಮಂಡಿಯೂರಿದ್ದರೂ, ಕೆರೆಬಿಯನ್ ಆಟಗಾರ ಹಿಡಿದ ಆ ಕ್ಯಾಚ್ ಭಾರಿ ಸದ್ದು ಮಾಡಿದೆ.

ಮೂರನೇ ದಿನದಾಟ ಆರಂಭವಾದ ಉತ್ತಮ ರೀತಿಯಲ್ಲಿಯೇ ಆಟವಾಡುತ್ತಿದ್ದ ಭಾರತದ ವಿಕೆಟ್ ಕೀಪರ್ ರಿಷಬ್ ಪಂತ್ 92ರನ್ ಹೊಡೆದು ಶತಕದತ್ತ ಮುನ್ನುಗುತ್ತಿದ್ದರು. ಆಗ ಗ್ಯಾಬ್ರಿಯಲ್ ಎಸೆದ ಬಾಲ್ ನ್ನು ಬೌಂಡರಿಗೆ ಅಟ್ಟಲು ಪಂತ್ ಪ್ರಯತ್ನಿಸಿದರು. ಈ ವೇಳೆ ಶಿಮ್ರಾನ್ ತಮ್ಮ ಫೀಲ್ಡಿಂಗ್ ಚಮಕ್ ನಿಂದ ಅದ್ಬುತವಾದ ಕ್ಯಾಚ್ ಹಿಡಿಯುವ ಮೂಲಕ ಪಂತ್ ಶತಕಕ್ಕೆ ತಣ್ಣೀರು ಎರೆಚಿದರು.

ಪಂತ್ ಅವರ ಈ ಕ್ಯಾಚ್ ನ್ನು ಹಿಂಭಾಗಕ್ಕೆ ಡೈವ್ ಮಾಡಿ ಹಿಡಿದಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಆದರೆ ಇದಕ್ಕೂ ಮೊದಲು ಹೊಲ್ಡರ್ ನೇತೃತ್ವದ ವೆಸ್ಟ್ ಇಂಡೀಸ್, ಭಾರತದ ವಿರುದ್ಧ ಮೊದಲ ಪಂದ್ಯಕ್ಕೆ ಹೋಲಿಸಿದರೆ ಉತ್ತಮ ಪ್ರದರ್ಶನವನ್ನು ನೀಡಿತ್ತು. ಎರಡನೇ ಇನ್ನಿಂಗ್ಸ್ ಕೆರೆಬಿಯನ್ನರು ನಡೆಸಿದ ಪೆವಿಲಿಯಲ್ ಪೆರೇಡ್ ನಿಂದ ಸೋಲನ್ನು ಅನುಭವಿಸಬೇಕಾಯಿತು.

ಮೊದಲನೇ ಪಂದ್ಯದಲ್ಲಿ ಗಾಯದಿಂದ ಹೊರಗುಳಿದಿದ್ದ ವಿಂಡೀಸ್ ನಾಯಕ ಹೊಲ್ಡರ್, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಐದು ವಿಕೆಟ್ ಗಳನ್ನು ಪಡೆದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...