alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಾತಂತ್ರ್ಯ ದಿನದಂದು ದೇಶದ ಜನರಿಗೆ ಕೊಹ್ಲಿ ‘ಚಾಲೆಂಜ್’

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಗೆ ತಯಾರಿ ನಡೆಸುತ್ತಿದ್ದಾರೆ. ಮೊದಲ ಟೆಸ್ಟ್ ನಲ್ಲಿ ಕೊಹ್ಲಿ ಶತಕ ಫಲ ನೀಡಲಿಲ್ಲ. ಎರಡನೇ ಪಂದ್ಯದಲ್ಲಿ ಗೆಲುವಿನ ಆಶಯದಲ್ಲಿರುವ ಕೊಹ್ಲಿ ಸಮಯ ಹೊಂದಿಸಿಕೊಂಡು ಸ್ವಾತಂತ್ರ್ಯ ದಿನ ದೇಶಿಯರಿಗೆ ವಿಶೇಷ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ.

ಕೊಹ್ಲಿ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಸಾಮಾಜಿಕ ವಿಷ್ಯಗಳ ಬಗ್ಗೆ ಆಗಾಗ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದಾರೆ. ಇತ್ತೀಚೆಗಷ್ಟೇ ಫಿಟ್ನೆಸ್ ಚಾಲೆಂಜ್ ಪೂರೈಸಿದ್ದ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಫಿಟ್ನೆಸ್ ವಿಡಿಯೋವನ್ನು ಹಾಕಿದ್ದರು. ಈಗ ಇನ್ನೊಂದು ಸಂದೇಶವನ್ನು ದೇಶದ ಜನತೆಗೆ ರವಾನೆ ಮಾಡಿದ್ದಾರೆ.

ಕೊಹ್ಲಿ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಇದ್ರಲ್ಲಿ ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ಕೊಹ್ಲಿ, ಸ್ವಾತಂತ್ರ್ಯ ದಿನದಂದು ಸಾಂಪ್ರದಾಯಿಕ ಉಡುಗೆ ತೊಡುವಂತೆ ಕರೆ ನೀಡಿದ್ದಾರೆ. ನೀವು ರಕ್ತ ನೀಡಿ, ನಾನು ಸ್ವಾತಂತ್ರ್ಯ ಕೊಡಿಸುತ್ತೇನೆ ಅಂತ ಸಂದೇಶವನ್ನು ಚಿಕ್ಕವನಿರುವಾಗಿನಿಂದ ಕೇಳ್ತ ಬಂದಿದ್ದೇನೆ. ಈಗ್ಲೂ ಇದು ನೆನಪಿದೆ. ಸ್ವಾತಂತ್ರ್ಯದಿನದಂದು ದೇಶದ ಸಾಂಪ್ರದಾಯಿಕ ಉಡುಗೆ ಧರಿಸುತ್ತೇನೆ. ನೀವು ಧರಿಸಿ ಎಂದ ಕೊಹ್ಲಿ, ಶಿಖರ್ ಧವನ್ ಹಾಗೂ ರಿಷಬ್ ಪಂತ್ ಹೆಸರನ್ನು ನಾಮ ನಿರ್ದೇಶನ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...