alex Certify
ಕನ್ನಡ ದುನಿಯಾ       Mobile App
       

Kannada Duniya

ಅಫ್ಘಾನಿಸ್ತಾನದ ವಿರುದ್ಧ ಧವನ್ ಅಬ್ಬರ

ಅಫ್ಘಾನಿಸ್ತಾನದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಭರ್ಜರಿ ಆರಂಭ ಕಂಡಿದೆ. ಟೀಂ ಇಂಡಿಯಾ ನಾಯಕ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ರಹಾನೆ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅಪಘಾನಿಸ್ತಾನ ಮೊದಲ ಟೆಸ್ಟ್ ಪಂದ್ಯ ಇದಾಗಿದ್ದು, ಜೂನ್ ತಿಂಗಳಿನಲ್ಲಿ ಭಾರತದಲ್ಲಿ ಇದೇ ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಆಯೋಜನೆ ಮಾಡಲಾಗಿದೆ.

ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಶಿಖರ್ ಧವನ್ ಅಬ್ಬರಿಸುತ್ತಿದ್ದಾರೆ. 26 ಓವರ್ ಗಳಲ್ಲಿ ಧವನ್ ತಮ್ಮ ವೃತ್ತಿ ಜೀವನದ 7ನೇ ಶತಕ ಸಿಡಿಸಿದ್ದಾರೆ. 20ನೇ ಓವರ್ ನಲ್ಲಿಯೇ ಭಾರತದ ಸ್ಕೋರ್ 100ರ ಗಡಿ ದಾಟಲು ನೆರವಾದ ಧವನ್ 26ನೇ ಓವರ್ ನಲ್ಲಿ ಶತಕ ಸಿಡಿಸಿ, ಭಾರತದ ಸ್ಕೋರ್ 150 ರ ಗಡಿ ದಾಟಲು ನೆರವಾದ್ರು.

ಧವನ್ 47 ಬಾಲ್ ಗೆ 50 ರನ್ ಸಿಡಿಸಿದ್ರು. 10 ಬೌಂಡರಿ ಹಾಗೂ ಒಂದು ಸಿಕ್ಸ್ ಸಿಡಿಸಿ ಅಬ್ಬರಿಸಿದ್ರು. ಮುರಳಿ ವಿಜಯ್ 18 ರನ್ ಗಳಿಸಿ ಕ್ರೀಸ್ ನಲ್ಲಿ ಧವನ್ ಗೆ ಸಾಥ್ ನೀಡಿದ್ದಾರೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...