alex Certify
ಕನ್ನಡ ದುನಿಯಾ       Mobile App
       

Kannada Duniya

ಇಮ್ರಾನ್ ಖಾನ್ ಕ್ರಿಕೆಟ್ ಜೀವನದ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ

ಪಾಕಿಸ್ತಾನ ವಿಶ್ವ ಕ್ರಿಕೆಟ್ ಗೆ ಅದೆಷ್ಟೋ ಪ್ರತಿಭೆಗಳನ್ನು ನೀಡಿದೆ. ಈ ಪ್ರತಿಭೆಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ, ಇಮ್ರಾನ್ ಖಾನ್. ಪಾಕ್ ತಂಡದ ಯಶಸ್ವಿ ನಾಯಕರಲ್ಲಿ ಕಂಡು ಬರುವ ಇಮ್ರಾನ್ ಖಾನ್ ಮುಂದಾಳತ್ವದಲ್ಲಿ ಪಾಕ್ 75 ಜಯ ಸಾಧಿಸಿದೆ. ಅಲ್ಲದೆ ಬಹು ವರ್ಷಗಳಿಂದ ಕಾಣುತ್ತಿದ್ದ ವಿಶ್ವ ಕಪ್ ಕನಸು ನನಸಾಗಿಸಿದ ಸಾಧಕ.

1987ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕ್, ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು. ಆ ಬಳಿಕ ಇಮ್ರಾನ್ ಖಾನ್ ಕ್ರಿಕೆಟ್ ನಿಂದ ಸನ್ಯಾಸ ಪಡೆದ್ರು. ಆದ್ರೆ, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅನುಭವಿಯ ಅನುಭವಕ್ಕೆ ಮಣೆ ಹಾಕಿ 1988ರಲ್ಲಿ ಮತ್ತೆ ತಂಡದಲ್ಲಿ ಸ್ಥಾನ ನೀಡಿತು. 1992ರ ವಿಶ್ವಕಪ್ ದೃಷ್ಠಿಯಿಂದ ತಂಡ ಕಟ್ಟುವ ಹೊಣೆ ಇಮ್ರಾನ್ ಹೆಗಲೇರಿತು. ಅಲ್ಲಿಂದ ಇಮ್ರಾನ್ ಕ್ರಿಕೆಟ್ ಜೀವನ ಬದಲಾಯಿತು. ಅಲ್ಲದೆ ಇಂಗ್ಲೆಂಡ್ ವಿರುದ್ಧ ಫೈನಲ್ ಗೆದ್ದ ಪಾಕ್, ಚೊಚ್ಚಲ ಬಾರಿಗೆ ವಿಶ್ವಕಪ್ ಗೆ ಮುತ್ತಿಟ್ಟಿತು.

ಇಮ್ರಾನ್ ಖಾನ್ ಬೆಸ್ಟ್ ಆಲ್ರೌಂಡರ್. ಪಾಕಿಸ್ತಾನಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ತಂಡಕ್ಕೆ ನೆರವಾದ ಪ್ಲೇಯರ್. ಇಮ್ರಾನ್ 68 ಟೆಸ್ಟ್ ಪಂದ್ಯಗಳಲ್ಲಿ 300 ವಿಕೆಟ್ ಪಡೆದು ಸಾಧನೆ ಮಾಡಿದ್ದರು. ಅಲ್ಲದೆ ತಮ್ಮ ವೃತ್ತಿ ಜೀವನದಲ್ಲಿ 362 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಪಾಕಿಸ್ತಾನ ಪರ 88 ಟೆಸ್ಟ್ ಪಂದ್ಯ ಆಡಿರುವ ಇಮ್ರಾನ್ ಖಾನ್ 3807 ರನ್ ಬಾರಿಸಿದ್ದಾರೆ.

ಪಾಕಿಸ್ತಾನ ಟೆಸ್ಟ್ ತಂಡ ಭಾರತದಲ್ಲಿ ಸರಣಿ ಗೆಲುವಿನ ಆಸೆಗೆ ರೆಕ್ಕೆ ನೀಡಿದ್ದು ಇಮ್ರಾನ್ ಖಾನ್. 1987ರಲ್ಲಿ ಪಾಕಿಸ್ತಾನ 5 ಟೆಸ್ಟ್ ಸರಣಿಯನ್ನು ಆಡಲು ಭಾರತಕ್ಕೆ ಬಂದಿತ್ತು. ಬೆಂಗಳೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತವನ್ನು ಮಣಿಸಿ ಪಾಕ್ 1-0 ಯಿಂದ ಸರಣಿ ವಶಕ್ಕೆ ಪಡೆದಿತ್ತು.

1978 ರಿಂದ 1988ರ ವರೆಗೆ ದಶಕಗಳ ಕಾಲ ತವರಿನಲ್ಲಿ ಸೋಲನ್ನೇ ಕಾಣದ ವಿಂಡೀಸ್ ತಂಡಕ್ಕೆ ಶಾಕ್ ನೀಡಿದ ಪಾಕಿಸ್ತಾನ ತಂಡದ ಮುಂದಾಳು ಇಮ್ರಾನ್ ಖಾನ್. ಸದ್ಯ ಇಮ್ರಾನ್ ಖಾನ್ ಕ್ರಿಕೆಟ್ ನಿಂದ ದೂರ ಸರಿದಿದ್ದು, ಪ್ರಧಾನಿ ಗಾದಿಯ ರೇಸ್ ನಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...