alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಾಜಿ ಕ್ರಿಕೆಟರ್

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರ ಮೂರನೇ ಮದುವೆ ಕುರಿತು ಕೇಳಿ ಬರುತ್ತಿದ್ದ ವದಂತಿಗಳಿಗೆ ಕೊನೆಗೂ ತೆರೆ ಬಿದ್ದಿದೆ. ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಇಮ್ರಾನ್ ಖಾನ್ ರ ಮೂರನೇ ಮದುವೆ ಕುರಿತ ಮಾಹಿತಿ ಹೊರ ಬಿದ್ದಿದೆ.

ಧಾರ್ಮಿಕ ಸಲಹೆಗಾರ್ತಿ ಬುಶ್ರಾ ಮನೇಕಾರನ್ನು ಇಮ್ರಾನ್ ಖಾನ್ ವಿವಾಹವಾಗಿದ್ದಾರೆನ್ನಲಾಗಿದ್ದು, ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಆಯ್ದ ಸ್ನೇಹಿತರಷ್ಟೇ ಹಾಜರಿದ್ದರೆಂದು ಮೂಲಗಳು ಹೇಳಿವೆ. ಇಮ್ರಾನ್ ಖಾನ್ ಅವರ ವಿವಾಹದ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಧಾರ್ಮಿಕ ಸಲಹೆಗಾರ್ತಿ 40 ವರ್ಷದ ಬುಶ್ರಾ ಮನೇಕಾ ಈ ಹಿಂದೆ ಇಸ್ಲಾಮಾಬಾದ್ ನ ಹಿರಿಯ ಕಸ್ಟಮ್ಸ್ ಅಧಿಕಾರಿಯನ್ನು ವಿವಾಹವಾಗಿದ್ದು, ವಿಚ್ಚೇದನ ಪಡೆದುಕೊಂಡಿದ್ದರು. ಕೆಲ ವರ್ಷಗಳ ಹಿಂದೆ ಇಮ್ರಾನ್ ಖಾನ್ ಹಾಗೂ ಬುಶ್ರಾ ಮನೇಕಾ ಭೇಟಿಯಾಗಿದ್ದು, ಬಳಿಕ ಪ್ರೀತಿಯಲ್ಲಿ ಬಿದ್ದಿದ್ದರು. ಇವರಿಬ್ಬರ ವಿವಾಹ ಕುರಿತು ಈ ಹಿಂದೆ ವದಂತಿ ಹರಡಿತ್ತಾದರೂ ಅದನ್ನು ನಿರಾಕರಿಸಿದ್ದ ಇಮ್ರಾನ್ ಖಾನ್, ತಾನು ಪ್ರಪೋಸ್ ಮಾಡಿದ್ದೇನಷ್ಟೇ ವಿವಾಹವಾಗಿಲ್ಲವೆಂದು ಸ್ಪಷ್ಟಪಡಿಸಿದ್ದರು.

ಇಮ್ರಾನ್ ಖಾನ್ ರಿಗೆ ಇದು ಮೂರನೇ ವಿವಾಹವಾಗಿದ್ದು, ಮೇ 16, 1995 ರಲ್ಲಿ ಜೆಮಿಮಾ ಜೊತೆ ಮೊದಲ ಬಾರಿಗೆ ಅವರು ವಿವಾಹವಾಗಿದ್ದು, 9 ವರ್ಷದ ದಾಂಪತ್ಯದ ಬಳಿಕ ಜೂನ್ 22, 2004 ರಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು. ಅದಾದ ಬಳಿಕ ರೆಹಾಮ್ ಎಂಬಾಕೆಯೊಂದಿಗೆ ಇಮ್ರಾನ್ ಖಾನ್ ಎರಡನೇ ಮದುವೆಯಾಗಿದ್ದು, ಆದರೆ ಕೇವಲ 10 ತಿಂಗಳಲ್ಲೇ ಇವರಿಬ್ಬರ ದಾಂಪತ್ಯ ಅಂತ್ಯಗೊಂಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...