alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಮ್ಮೆ ತಲೆಗೆ ಹುಳ ಬಿಟ್ಟ ವೀರೇಂದ್ರ ಸೆಹ್ವಾಗ್…!

ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ಆಟದ ಮೂಲಕವೇ ಹೆಸರು ವಾಸಿ. ಈಗ ಅಂಗಳದಿಂದ ಹಿಂದೆ ಸರಿದಿರುವ ಸೆಹ್ವಾಗ್, ಟ್ವಿಟರ್ ನಲ್ಲಿ ಸದ್ದು ಮಾಡ್ತಾ ಇದ್ದಾರೆ. ಟ್ವಿಟರ್ ನಲ್ಲಿ ವೀರೂ ಹಾಕುವ ಪೋಸ್ಟ್ ಗಳಿಗೆ ಸಕತ್ ರೆಸ್ಪಾನ್ಸ್ ಸಿಗುತ್ತದೆ.

ವೀರೇಂದ್ರ ಸೆಹ್ವಾಗ್ ಟ್ವೀಟರ್ ನಲ್ಲಿ ಸಾಮಾಜಿಕ ಕಳಕಳಿ, ಕೌಟುಂಬಿಕ ಜೋಕ್ ಗಳನ್ನು ಹಾಕಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಿನ್ನೆ ಎರಡು ಪಕ್ಷಿಗಳು ಒಂದು ಟೊಂಗೆಯ ಮೇಲೆ ಕುಳಿತಿರುವ ಫೋಟೋ ಹಾಕಿದ್ದಾರೆ. ಈ ಫೋಟೋ ಕೆಳಗಡೆ ಈ ಪಕ್ಷಿಯ ಬಗ್ಗೆ ಹೆಚ್ಚಿನ ಮಾಹಿತಿ ಸಿಗದು. ಆದ್ರೆ, ಈ ಎರಡೂ ಪಕ್ಷಿಗಳಲ್ಲಿ ಪತಿ ಯಾರು ಎಂಬುದನ್ನು ಕಂಡು ಹಿಡಿಯಬಹುದು ಎಂದು ಟ್ವಿಟ್ ಮಾಡಿದ್ದಾರೆ.

ಈ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ 32000 ಜನ ಲೈಕ್ ಮಾಡಿದ್ರೆ, ಟ್ವಿಟರ್ ನಲ್ಲಿ 11 ಸಾವಿರ ಜನ ಲೈಕ್ ಮಾಡಿದ್ದಾರೆ. ಇನ್ನು ಹಲವು ನೆಟ್ಟಿಗರು ಕಮೆಂಟ್ ಮಾಡಿ ಎಂಜಾಯ್ ಮಾಡಿದ್ದಾರೆ. ವೀರೇಂದ್ರ ಸೆಹ್ವಾಗ್, ದಾಂಪತ್ಯದ ಬಗ್ಗೆ ಈ ರೀತಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ವೀರೂ ಇಂತಹ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...