alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ- ಬಾಂಗ್ಲಾ ನಡುವಣ ಪಂದ್ಯ ‘ಫಿಕ್ಸಿಂಗ್’ ಆಗಿತ್ತಂತೆ !!

hardik-pandya-india-cricket-1459008696-800

ಬಾಂಗ್ಲಾದೇಶದ ವಿರುದ್ದ ಟಿ-20 ಪಂದ್ಯದಲ್ಲಿ ಭಾರತ ರೋಚಕ ಗೆಲುವು ದಾಖಲಿಸಿರುವ ಬೆನ್ನಲ್ಲಿಯೇ ಈ ಪಂದ್ಯ ‘ಫಿಕ್ಸಿಂಗ್‌’ ಆಗಿರುವ ಸಾಧ್ಯತೆ ದಟ್ಟವಾಗಿದೆ ಎಂದು ಪಾಕ್ ನ ಮಾಜಿ ಸ್ಪಿನ್ನರ್‌ ತೌಸಿಫ್‌ ಅಹ್ಮದ್‌ ಆರೋಪಿಸಿದ್ದಾರೆ.

ಭಾರತದ ಗೆಲುವಿನ ಕುರಿತು ಮಾತನಾಡಿರುವ ತೌಸಿಫ್‌ ಅಹ್ಮದ್‌, ಬಾಂಗ್ಲಾದೇಶ ಕ್ರಿಕೆಟ್‌ ತಂಡ ಅನುಭವಿಗಳಿಂದ ಕೂಡಿದ್ದು, ಅದರಲ್ಲಿಯೂ ಬೆಂಗಳೂರಿನಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಪಂದ್ಯದಲ್ಲಿನ ಕೊನೆಯ ಕ್ಷಣದಲ್ಲಿ ಅನುಭವ ಹೊಂದಿದ್ದ ಉತ್ತಮ ಆಟಗಾರರೇ ಕ್ರೀಸ್‌ನಲ್ಲಿದ್ದರು. ಹೀಗಿದ್ದರೂ ಪಂದ್ಯದಲ್ಲಿ ಟೈ ಮಾಡಿಕೊಳ್ಳುವುದನ್ನು ಬಿಟ್ಟು ದೊಡ್ಡ ಹೊಡೆತಗಳಿಗೆ ಮುಂದಾಗಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ಈ ಪಂದ್ಯ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಫಿಕ್ಸಿಂಗ್ ನಡೆದಿರುವುದು ಖಚಿತ ಎಂದಿರುವ ತೌಸಿಫ್‌ ಅಹ್ಮದ್‌, ಐಸಿಸಿ ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ಘಟಕದಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...