alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಡರ್ 19 ಆಟಗಾರರಿಗೆ ‘ಕೋಚ್’ ರಾಹುಲ್ ದ್ರಾವಿಡ್ ಹೇಳಿರುವುದೇನು…?

ಐಸಿಸಿ ಅಂಡರ್ 19 ವಿಶ್ವ ಕಪ್ ಗಾಗಿ ಭಾರತ ಕಿರಿಯರ ತಂಡ ಪ್ರಸ್ತುತ ನ್ಯೂಜಿಲ್ಯಾಂಡ್ ನಲ್ಲಿದೆ. ಸೆಮಿಫೈನಲ್ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರೀ ಅಂತರದಿಂದ ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದೆ.

ಇಂದು ಫೈನಲ್ ಪಂದ್ಯ ನಡೆಯಲಿದ್ದು, ಎದುರಾಳಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ವಿಶ್ವ ಕಪ್ ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದಾರೆ ಕಿರಿಯ ಆಟಗಾರರು. ಈ ಮಧ್ಯೆ ಭಾರತದ ಅಂಡರ್ 19 ತಂಡದ ಯಶಸ್ಸಿಗೆ ಕೋಚ್ ರಾಹುಲ್ ದ್ರಾವಿಡ್ ರ ಪರಿಶ್ರಮವೇ ಕಾರಣವೆಂಬ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ.

ಪಾಕ್ ಕ್ರಿಕೆಟ್ ಅಭಿಮಾನಿಗಳು ಕೂಡಾ ರಾಹುಲ್ ದ್ರಾವಿಡ್ ರನ್ನು ಶ್ಲಾಘಿಸಿದ್ದು, ಪಾಕಿಸ್ತಾನ ಕಿರಿಯರ ತಂಡಕ್ಕೆ ದ್ರಾವಿಡ್ ರಂತಹ ಸಮರ್ಥ ಕೋಚ್ ಇಲ್ಲವೆಂದು ಪರಿತಪಿಸಿದ್ದಾರೆ.

ಈ ಮಧ್ಯೆ ಫೈನಲ್ ಪಂದ್ಯದತ್ತ ದೃಷ್ಟಿ ನೆಟ್ಟಿರುವ ರಾಹುಲ್ ದ್ರಾವಿಡ್, ಆಟಗಾರರಿಗೆ ತಮ್ಮ ಮೊಬೈಲ್ ಫೋನ್ ಗಳನ್ನು ಸ್ವಿಚ್ಚಾಫ್ ಮಾಡುವಂತೆ ತಾಕೀತು ಮಾಡಿದ್ದಾರೆನ್ನಲಾಗಿದೆ. ಸ್ಣೇಹಿತರು, ಕುಟುಂಬಸ್ಥರು ಹಾಗೂ ಮಾಧ್ಯಮದವರ ಕರೆಯಿಂದ ಆಟಗಾರರ ಏಕಾಗ್ರತೆಗೆ ಭಂಗ ಬರಬಹುದೆಂಬ ಕಾರಣಕ್ಕೆ ದ್ರಾವಿಡ್ ಈ ಸೂಚನೆ ನೀಡಿದ್ದಾರೆನ್ನಲಾಗಿದೆ. ಸೆಮಿಫೈನಲ್ ಪಂದ್ಯದಿಂದಲೇ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಇತ್ತೀಚೆಗೆ ನಡೆದ ಐಪಿಎಲ್ ಹರಾಜಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಕೆಲ ಕಿರಿಯ ಆಟಗಾರರಿಗೆ ಇನ್ನೂ ಅದರ ಮಾಹಿತಿಯೂ ಇಲ್ಲವೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...