alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಟ್ರೇಲಿಯಾ ವಿರುದ್ದದ ಗೆಲುವಿನ ಕುರಿತು ಕೊಹ್ಲಿ ಹೇಳಿದ್ದೇನು..?

600463178-viart1_6

ಟಿ-20 ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಲು ಕಾರಣರಾದ ವಿರಾಟ್ ಕೊಹ್ಲಿ ಪಂದ್ಯದ ಕುರಿತಾಗಿ ಮಾತನ್ನಾಡಿದ್ದು, ಇದು ನನ್ನ ಜೀವನದ ಅತ್ಯುತ್ತಮ ಇನ್ನಿಂಗ್ಸ್ ಎಂದು ತಿಳಿಸಿದ್ದಾರೆ.

51 ಎಸೆತಗಳಿಂದ 82 ರನ್ ಗಳಿಸಿ ಭಾರತವನ್ನು ಗೆಲುವಿನತ್ತ ಸಾಗಿಸಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಪಡೆದ ಕೊಹ್ಲಿ, ತಂಡದ ಗೆಲುವಿನ ಕುರಿತಾಗಿ ಮಾತನಾಡಿ, ನಾನು ತುಂಬಾ ಭಾವುಕನಾಗಿದ್ದು ಏನು ಹೇಳಬೇಕೆಂಬುದೇ ತೋಚುತ್ತಿಲ್ಲ. ಆದರೆ ಇದು ನನ್ನ ಜೀವನದ ಅತ್ಯುತ್ತಮ ಇನ್ನಿಂಗ್ಸ್ ಎಂಬುದಂತೂ ನಿಜ ಎಂದು ವಿವರಿಸಿದ್ದಾರೆ.

ಅಲ್ಲದೇ ಯುವರಾಜ್ ಸಿಂಗ್ ಉತ್ತಮ ಜೊತೆಯಾಟವಾಡಿದ್ದು, ಆದರೆ ಅವರನ್ನು ಕಾಡಿದ ಗಾಯದ ನೋವು ರನ್ ಗಳಿಸಲು ಸ್ವಲ್ಪ ಕಷ್ಟವೆನಿಸಿತು. ಆದರೂ ಬೌಂಡರಿ ಹೊಡೆಯುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು ಎಂದ ಕೊಹ್ಲಿ, ನಾಯಕ ಧೋನಿ ಅವರ ಜತೆಗಿನ ಜತೆಯಾಟ ಭಾರತವನ್ನು ಗೆಲುವಿನತ್ತ ಕರೆದೊಯ್ಯಲು ಸಹಕಾರಿಯಾಯಿತು ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...