alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು

pak-win-dd

ಲಂಡನ್: ಕೆನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಹೀನಾಯ ಸೋಲು ಕಂಡಿದೆ.

339 ಗೆಲುವಿನ ಗುರಿ ಪಡೆದಾಗಲೇ ಭಾರತ ಸೋಲುವ ಹಾದಿಯಲ್ಲಿತ್ತು. 72 ರನ್ ಗಳಿಸುವಷ್ಟರಲ್ಲಿ ಪ್ರಮುಖ 6 ವಿಕೆಟ್ ಪತನವಾಗಿ ಕ್ರಿಕೆಟ್ ನೋಡುತ್ತಿದ್ದವರೆಲ್ಲಾ ಚಾನೆಲ್ ಚೇಂಜ್ ಮಾಡಿದ್ದಾರೆ.

ಭಾರತಕ್ಕೆ ಆರಂಭದಲ್ಲೇ ಹಿನ್ನಡೆಯಾಗಿದೆ. ಖಾತೆ ಆರಂಭಿಸುವ ಮೊದಲೇ ರೋಹಿತ್ ಶರ್ಮ ಔಟಾಗಿದ್ದಾರೆ. ಶಿಖರ್ ಧವನ್ 21, ವಿರಾಟ್ ಕೊಹ್ಲಿ 5, ಯುವರಾಜ್ ಸಿಂಗ್ 22, ಎಂ.ಎಸ್. ಧೋನಿ 4, ಕೇದಾರ್ ಜಾಧವ್ 9, ಹಾರ್ದಿಕ್ ಪಾಂಡ್ಯ 76, ರವೀಂದ್ರ ಜಡೇಜ 15, ರವಿಚಂದ್ರನ್ ಅಶ್ವಿನ್ 1, ಭುವನೇಶ್ವರ್ ಕುಮಾರ್  1, ಜಸ್ ಪ್ರೀತ್ ಬೂಮ್ರಾ 1 ರನ್ ಗಳಿಸಿದರು.

ಅಂತಿಮವಾಗಿ ಭಾರತ 30.3 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 158 ರನ್ ಗಳಿಸಿ ಹೀನಾಯ ಸೋಲು ಕಂಡಿದೆ.

ಪಾಕ್ ಪರವಾಗಿ ಮೊಹಮ್ಮದ್ ಅಮೀರ್ 3, ಶಾದಾಬ್ ಖಾನ್ 2, ಹಸನ್ ಅಲಿ 3, ಜುನೈದ್ ಖಾನ್ 1 ವಿಕೆಟ್ ಪಡೆದರು.

ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ದುಕೊಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲೆಕ್ಕಾಚಾರ ತಲೆಕೆಳಗಾಗಿದೆ. ಪಾಕಿಸ್ತಾನ ನೀಡಿದ ಬೃಹತ್ ಮೊತ್ತವನ್ನು ತಲುಪಲು ಟೀಂ ಇಂಡಿಯಾ ವಿಫಲವಾಗಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಪಾಕ್ ಪರವಾಗಿ ಅಜರ್ ಅಲಿ 59, ಫಕರ್ ಜಮಾನ್ 114, ಬಾಬರ್ ಆಜಂ 46, ಶೋಯಿಬ್ ಮಲಿಕ್ 12, ಮೊಹಮ್ಮದ್ ಹಫೀಜ್ ಅಜೇಯ 57, ಇಮಾದ್ ವಸೀಂ ಅಜೇಯ 25 ರನ್ ಗಳಿಸಿದ್ದಾರೆ.

ಪಾಕ್ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದೆ. ಭಾರತದ ಪರವಾಗಿ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್ ತಲಾ 1 ವಿಕೆಟ್ ಪಡೆದಿದ್ದಾರೆ. ಪಾಕ್ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಬೀಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...