alex Certify
ಕನ್ನಡ ದುನಿಯಾ       Mobile App
       

Kannada Duniya

ಉಲ್ಟಾ ಆಯ್ತು ಲೆಕ್ಕಾಚಾರ: ಗೆಲುವಿಗೆ ಬೇಕಿದೆ 339 ರನ್

run-guri

ಲಂಡನ್: ಕೆನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತದ ಗೆಲುವಿಗೆ ಕಠಿಣ ಸವಾಲು ಎದುರಾಗಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲೆಕ್ಕಾಚಾರ ತಲೆಕೆಳಗಾಗಿದೆ. ಪಾಕಿಸ್ತಾನ ಬೃಹತ್ ಮೊತ್ತವನ್ನು ಕಲೆಹಾಕಿದ್ದು, ಭಾರತದ ಗೆಲುವಿಗೆ ಬರೋಬ್ಬರಿ 339 ರನ್ ಗುರಿ ನಿಗದಿಪಡಿಸಿದೆ.

ಪಾಕ್ ಪರವಾಗಿ ಅಜರ್ ಅಲಿ 59, ಫಕರ್ ಜಮಾನ್ 114, ಬಾಬರ್ ಆಜಂ 46, ಶೋಯಿಬ್ ಮಲಿಕ್ 12, ಮೊಹಮ್ಮದ್ ಹಫೀಜ್ ಅಜೇಯ 57, ಇಮಾದ್ ವಸೀಂ ಅಜೇಯ 25 ರನ್ ಗಳಿಸಿದ್ದಾರೆ.

ಪಾಕ್ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದೆ. ಭಾರತದ ಪರವಾಗಿ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್ ತಲಾ 1 ವಿಕೆಟ್ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...