alex Certify
ಕನ್ನಡ ದುನಿಯಾ       Mobile App
       

Kannada Duniya

ಹೈ ವೋಲ್ಟೇಜ್ ಮ್ಯಾಚ್ ನತ್ತ ಎಲ್ಲರ ಚಿತ್ತ

pak-indid

ಬರ್ಮಿಂಗ್ ಹ್ಯಾಂ: ಬರ್ಮಿಂಗ್ ಹ್ಯಾಂನ ಎಡ್ಜ್ ಬಾಸ್ಟನ್ ಮೈದಾನದಲ್ಲಿ ನಡೆಯಲಿರುವ ಹೈ ವೋಲ್ಟೇಜ್ ಮ್ಯಾಚ್ ನಲ್ಲಿ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಭಾನುವಾರ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಉಭಯ ತಂಡಗಳು ಗೆಲುವಿಗೆ ಕಾರ್ಯ ತಂತ್ರ ರೂಪಿಸಿವೆ.

ಪ್ರಸಕ್ತ ಸಾಲಿನ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಪಂದ್ಯವನ್ನಾಡುತ್ತಿರುವ ಟೀಂ ಇಂಡಿಯಾ, ಅಭ್ಯಾಸ ಪಂದ್ಯಗಳಲ್ಲಿ ಭರ್ಜರಿ ಜಯಗಳಿಸಿ ವಿಶ್ವಾಸದಲ್ಲಿದೆ. ಪಾಕಿಸ್ತಾನ ವಿರುದ್ಧ ಐ.ಸಿ.ಸಿ. ಟೂರ್ನಿಗಳಲ್ಲಿ ಎಂದಿಗೂ ಸೋಲದ ವಿಜಯಯಾತ್ರೆಯನ್ನು ಮುಂದುವರೆಸಲು ಸಜ್ಜಾಗಿದೆ.

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಎಲ್ಲಾ ವಿಭಾಗದಲ್ಲಿಯೂ ಸಮತೋಲನದಿಂದ ಕೂಡಿದ ತಂಡವಾಗಿದ್ದು, ಪಾಕ್ ವಿರುದ್ಧ ಗೆಲ್ಲಲಿದೆ ಎಂದು ಪಾಕಿಸ್ತಾನದ ನಾಯಕ ಶಾಹಿದ್ ಅಫ್ರೀದಿ ಕೂಡ ಹೇಳಿದ್ದಾರೆ.

ಭಾನುವಾರದ ಪಂದ್ಯದಲ್ಲಿ ಭಾರತ ಗೆಲ್ಲುವ ತಂಡವಾಗಿದೆ. ವಿರಾಟ್ ಕೊಹ್ಲಿ ಆಟ ನನ್ನ ಬಳಿ ನಡೆಯಲ್ಲ ಎಂದು ಪಾಕ್ ಬೌಲರ್ ಜನೇದ್ ಖಾನ್ ಹೇಳಿದ್ದು, ಇದಕ್ಕೆ ತಕ್ಕ ಉತ್ತರವನ್ನು ನೀಡಲು ಕೊಹ್ಲಿ ಸಜ್ಜಾಗಿದ್ದಾರೆ.

ಭಾನುವಾರ ರಜಾ ದಿನವಾಗಿರುವುದರಿಂದ ಹೈ ವೋಲ್ಟೇಜ್ ಮ್ಯಾಚ್ ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಕಾತರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...