alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ, ಯುವಿ ಅಬ್ಬರಕ್ಕೆ ಬೆಚ್ಚಿದ ಪಾಕ್ ಬೌಲರ್ ಗಳು

yuvraj-singh-virat

ಬರ್ಮಿಗ್ ಹ್ಯಾಂ: ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಓಪನರ್ ಗಳಾದ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಟಾಸ್ ಗೆದ್ದ ಪಾಕ್ ನಾಯಕ ಸರ್ಫರಾಜ್ ಅಹ್ಮದ್, ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದ್ದು, ಮೊದಲಿಗೆ ನಿಧಾನಗತಿಯೊಂದಿಗೆ ಆಟ ಆರಂಭಿಸಿ ಶರ್ಮ, ಧವನ್ ನಂತರ ಸಹಜ ಆಟ ಪ್ರದರ್ಶಿಸಿದರು.

ಪಾಕ್ ಬೌಲರ್ ಗಳನ್ನು ದಂಡಿಸಿದ ಶಿಖರ್ ಧವನ್ 65 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಒಳಗೊಂಡ 68 ರನ್ ಗಳಿಸಿ ಶಬಾದ್ ಖಾನ್ ಗೆ ವಿಕೆಟ್ ಒಪ್ಪಿಸಿದ್ದಾರೆ.

ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ರೋಹಿತ್ ಶರ್ಮ(91) ರನ್ ಗಳಿಸಿ ರನ್ ಔಟ್ ಆದರು. ಅಬ್ಬರದ ಆಟವಾಡಿದ ಯುವರಾಜ್ ಸಿಂಗ್ 32 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಒಳಗೊಂಡ 53 ರನ್ ಗಳಿಸಿ ಹಸನ್ ಅಲಿಗೆ ವಿಕೆಟ್ ಒಪ್ಪಿಸಿದರು.

ಮಳೆಯಿಂದಾಗಿ 2 ಸಲ ಪಂದ್ಯವನ್ನು ನಿಲ್ಲಿಸಲಾಗಿತ್ತು. ಅಲ್ಲದೇ ಪಂದ್ಯವನ್ನು 48 ಓವರ್ ಗೆ ನಿಗದಿ ಮಾಡಲಾಗಿದೆ. ವಿರಾಟ್ ಕೊಹ್ಲಿ ಅಜೇಯ 81, ಹಾರ್ದಿಕ್ ಪಾಂಡ್ಯ ಅಜೇಯ 20 ರನ್ ಗಳಿಸಿದ್ದಾರೆ. 48 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 319 ರನ್ ಗಳಿಸಿ, ಪಾಕ್ ಗೆಲುವಿಗೆ 320 ರನ್ ಟಾರ್ಗೆಟ್ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...