alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಕಾ ಮಣಿಸಿದ ಪಾಕ್ ಸೆಮಿಫೈನಲ್ ಎಂಟ್ರಿ

pak-semi

ಕಾರ್ಡಿಫ್: ಇಲ್ಲಿನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಿದೆ.

ಸರ್ಫರಾಜ್ ಅಹಮದ್ ಮತ್ತು ಮಹಮ್ಮದ್ ಅಮೀರ್ ಅಮೋಘ ಪ್ರದರ್ಶನದಿಂದ ಪಾಕ್ 3 ವಿಕೆಟ್ ಅಂತರದ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 49.2 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 236 ರನ್ ಗಳಿಸಿತ್ತು. ನಿರೋಶೆನ್ ಡಿಕ್ ವೆಲ್ಲಾ 73, ಧನುಷ್ಕ ಗುಣತಿಲಕ 13, ಕುಸಾಲ್ ಮೆಂಡಿಸ್ 27, ಎಂಜೆಲೊ ಮ್ಯಾಥ್ಯೂಸ್ 39, ಅಸೆಲ ಗುಣರತ್ನೆ 27, ಸುರಂಗ ಲಕ್ಮಲ್ 26 ರನ್ ಗಳಿಸಿದರು.

ಪಾಕ್ ಪರವಾಗಿ ಜುನೈದ್ ಖಾನ್ 3, ಹಸನ್ ಅಲಿ 3, ಮಹಮ್ಮದ್ ಅಮೀರ್ 2, ಫಾಹಿಮ್ ಅಶ್ರಫ್ 2 ವಿಕೆಟ್ ಪಡೆದರು.

237 ರನ್ ಗೆಲುವಿನ ಗುರಿ ಪಡೆದ ಪಾಕ್ ಪರವಾಗಿ ಅಜರ್ ಅಲಿ 34, ಫಕಾರ್ ಜಮಾನ್ 50, ಸರ್ಫರಾಜ್ ಅಹಮದ್ ಅಜೇಯ 61, ಮಹಮ್ಮದ್ ಅಮೀರ್ ಅಜೇಯ 28 ರನ್ ಗಳಿಸಿದ್ದು, 44.5 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 237 ರನ್ ಗಳಿಸಿ ಸೆಮಿಫೈನಲ್ ಪ್ರವೇಶಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...