alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಂಪಿಯನ್ಸ್ ಟ್ರೋಫಿಗೂ ಮುನ್ನವೇ ಪಾಕಿಸ್ತಾನದ ಮೈಂಡ್ ಗೇಮ್

yunis

ಸರ್ಫರಾಜ್ ಅಹ್ಮದ್ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಮಣಿಸುವ ಸಾಮರ್ಥ್ಯ ಹೊಂದಿದೆ ಅಂತಾ ಮಾಜಿ ಆಟಗಾರ ಯುನಿಸ್ ಖಾನ್ ಹೇಳಿದ್ದಾರೆ. ಮೇ 4ರಂದು ಲಂಡನ್ ನ ಎಡ್ಜ್ ಬಾಸ್ಟನ್ ನಲ್ಲಿ ಭಾರತ-ಪಾಕ್ ನಡುವಣ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಈ ಹಿಂದೆ ಕೂಡ ಹಲವು ಬಾರಿ ಪಾಕಿಸ್ತಾನ, ಭಾರತವನ್ನು ಸೋಲಿಸಿದೆ ಅನ್ನೋದು ಯುನಿಸ್ ಖಾನ್ ವಾದ. ಆದ್ರೆ ಇದುವರೆಗೆ ವಿಶ್ವಕಪ್ ಹಾಗೂ ಟಿ-20 ವಿಶ್ವಕಪ್ ನಲ್ಲಿ ನಡೆದ ಒಟ್ಟು 11 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ 2 ಪಂದ್ಯ ಗೆದ್ದಿದ್ದು, ಭಾರತ ಒಂದರಲ್ಲಿ ಮಾತ್ರ ಜಯಶಾಲಿಯಾಗಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಯಶಸ್ಸು ಸಿಗಬೇಕಂದ್ರೆ ಪಾಕ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಜೊತೆಗೆ ಫೀಲ್ಡಿಂಗ್ ಕಡೆಗೂ ಹೆಚ್ಚು ಗಮನಹರಿಸಬೇಕೆಂದು ಯುನಿಸ್ ಖಾನ್ ಸಲಹೆ ನೀಡಿದ್ದಾರೆ. ಪಾಕ್ ತಂಡವನ್ನು ಗೆಲುವಿನತ್ತ ಮುನ್ನಡೆಸಲು ನಾಯಕ ಸರ್ಫರಾಜ್ ಅಹ್ಮದ್ ಗೆ ಇದೊಂದು ಉತ್ತಮ ಅವಕಾಶ ಅಂತಾ ಹೇಳಿದ್ದಾರೆ. ಇತ್ತೀಚೆಗಷ್ಟೆ ಯುನಿಸ್ ಖಾನ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...