alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಬಗ್ಗುಬಡಿದ ಭಾರತಕ್ಕೆ ಭರ್ಜರಿ ಜಯ

win-india

ಬರ್ಮಿಗ್ ಹ್ಯಾಂ: ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯಗಳಿಸಿದೆ.

ಡಕ್ ವರ್ತ್ ಲೂಯಿಸ್ ನಿಯಮದಡಿ 124 ರನ್ ಅಂತರದಿಂದ ಭಾರತ ಜಯಗಳಿಸಿದೆ. ಈ ಮೂಲಕ ಐ.ಸಿ.ಸಿ. ಟೂರ್ನಿಗಳಲ್ಲಿ ಎಂದೂ ಪಾಕ್ ವಿರುದ್ಧ ಸೋಲದ ತನ್ನ ದಾಖಲೆಯನ್ನು ಮುಂದುವರೆಸಿದೆ.

ಭಾರೀ ಕುತೂಹಲದ ಈ ಪಂದ್ಯಕ್ಕೆ ಹಲವು ಬಾರಿ ಮಳೆ ಅಡ್ಡಿಯಾಗಿದ್ದರಿಂದ ಮೊದಲಿಗೆ ಓವರ್ ಗಳನ್ನು ಕಡಿತಗೊಳಿಸಲಾಯಿತು. ಪಾಕಿಸ್ತಾನ ತಂಡಕ್ಕೆ ಗುರಿಯನ್ನು ಮರು ನಿಗದಿ ಮಾಡಲಾಯಿತು.

41 ಓವರ್ ಗಳಲ್ಲಿ 281 ರನ್ ಗೆಲುವಿನ ಗುರಿ ಪಡೆದ ಪಾಕ್ 33.4 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿ ಸೋಲು ಕಂಡಿತು.

ಅಜರ್ ಅಲಿ 50, ಅಹಮದ್ ಶೇಜಾದ್ 12, ಮಹಮ್ಮದ್ ಹಫೀಜ್ 33, ಶೋಯೆಬ್ ಮಲಿಕ್ 15, ಸರ್ಫರಾಜ್ ಅಹಮದ್ 15, ಶಾದಾಬ್ ಖಾನ್ 14 ರನ್ ಗಳಿಸಿದರು. ಟೀಂ ಇಂಡಿಯಾ ಪರವಾಗಿ ಉಮೇಶ್ ಯಾದವ್ 3, ಭುವನೇಶ್ವರ್ ಕುಮಾರ್ 1, ಹಾರ್ದಿಕ್ ಪಾಂಡ್ಯ 2, ರವೀಂದ್ರ ಜಡೇಜ 2 ವಿಕೆಟ್ ಪಡೆದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 48 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 319 ರನ್ ಗಳಿಸಿತು.

ಓಪನರ್ ಗಳಾದ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಶಿಖರ್ ಧವನ್ 65 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಒಳಗೊಂಡ 68 ರನ್ ಗಳಿಸಿ ಶಬಾದ್ ಖಾನ್ ಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮ(91) ರನ್ ಗಳಿಸಿ ರನ್ ಔಟ್ ಆದರು.

ಅಬ್ಬರದ ಆಟವಾಡಿದ ಯುವರಾಜ್ ಸಿಂಗ್ 32 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಒಳಗೊಂಡ 53 ರನ್ ಗಳಿಸಿ ಹಸನ್ ಅಲಿಗೆ ವಿಕೆಟ್ ಒಪ್ಪಿಸಿದರು. ವಿರಾಟ್ ಕೊಹ್ಲಿ ಅಜೇಯ 81, ಹಾರ್ದಿಕ್ ಪಾಂಡ್ಯ ಅಜೇಯ 20 ರನ್ ಗಳಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...