alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ-ಪಾಕ್ ಪಂದ್ಯಕ್ಕೂ ಮುನ್ನ ಸಚಿನ್ ಹೇಳಿದ್ದೇನು?

sachin_760_1497755931_749x421

ಇಂಗ್ಲೆಂಡ್ ನ ಓವಲ್ ಮೈದಾನದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಚಾಂಪಿಯನ್ಸ್ ಟ್ರೋಫಿ ಅಂತಿಮ ಹಣಾಹಣಿ ನಡೆಸಲಿವೆ. ಹೈ ಓಲ್ಟೇಜ್ ಪಂದ್ಯ ವೀಕ್ಷಣೆಗೆ ಇಡೀ ವಿಶ್ವವೇ ಕಾದು ಕುಳಿತಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಇದ್ರಿಂದ ಹೊರತಾಗಿಲ್ಲ. ಗೆಲುವು ನಮ್ಮದೆ ಎಂಬ ವಿಶ್ವಾಸದಲ್ಲಿದ್ದಾರೆ ಮಾಸ್ಟರ್ ಬ್ಲಾಸ್ಟರ್.

ಪಾಕಿಸ್ತಾನದ ಜೊತೆ ಅನೇಕ ಪಂದ್ಯಗಳನ್ನು ಆಡಿರುವ ಸಚಿನ್ ಕೂಡ ಈ ಪಂದ್ಯ ವೀಕ್ಷಣೆಗೆ ಕುತೂಹಲರಾಗಿದ್ದಾರಂತೆ. ಈ ಫೈನಲ್ ಪಂದ್ಯ ವೀಕ್ಷಿಸಲು ಹೇಗೆ ವಿಶ್ವದ ಜನರು ಕಾತರರಾಗಿದ್ದಾರೋ ಅದೇ ರೀತಿ ನಾನು ಕಾತರನಾಗಿದ್ದೇನೆಂದು ಸಚಿನ್ ಹೇಳಿದ್ದಾರೆ. ಭಾರತೀಯರು ಉತ್ತಮ ಆಟ ಪ್ರದರ್ಶಿಸಿ ಗೆಲುವು ತಂದುಕೊಟ್ಟರೆ ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸಬಹುದೆಂದು ತೆಂಡೂಲ್ಕರ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಜೊತೆಗೆ ಉಳಿದ ಆಟಗಾರರ ಪ್ರದರ್ಶನವನ್ನೂ ಸಚಿನ್ ಹೊಗಳಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ಅದ್ಭುತವಾಗಿದೆ. ಕೊಹ್ಲಿ ಜೊತೆ ರೋಹಿತ್ ಶರ್ಮಾ, ಶಿಖರ್ ಧವನ್, ಯುವರಾಜ್ ಸಿಂಗ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಸ್ಪಿನ್ನರ್ ಗಳು ಕೂಡ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಭಾನುವಾರ ಕೂಡ ಹೀಗೆ ಆಟವಾಡಿ ನಾವೊಂದು ಬಲವಾದ ತಂಡವೆಂದು ಸಾಬೀತುಪಡಿಸಬೇಕಾಗಿದೆ ಎಂದು ಸಚಿನ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...