alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೆಂಡ್ ಬಗ್ಗುಬಡಿದ ಪಾಕ್ ಫೈನಲ್ ಗೆ

pak-win

ಕಾರ್ಡಿಫ್: ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿದ ಪಾಕಿಸ್ತಾನ ಫೈನಲ್ ಗೆ ಎಂಟ್ರಿ ಕೊಟ್ಟಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಪಾಕ್ ಬೌಲಿಂಗ್ ದಾಳಿಗೆ ತತ್ತರಿಸಿ 49.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 211 ರನ್ ಗಳಿಸಲಷ್ಟೇ ಶಕ್ತವಾಯಿತು.

ಇಂಗ್ಲೆಂಡ್ ಪರವಾಗಿ ಜಾನಿ ಬೈರ್ ಸ್ಟೋ 43, ಅಲೆಕ್ಸ್ ಹೆಲ್ಸ್ 13, ಜೋ ರೂಟ್ 46, ಇಯಾನ್ ಮಾರ್ಗನ್ 33, ಬೆನ್ ಸ್ಟೋಕ್ಸ್ 34, ಮೊಯಿನ್ ಅಲಿ 11 ರನ್ ಗಳಿಸಿದ್ದು, ಉಳಿದವರು 2 ಅಂಕಿ ತಲುಪಲಿಲ್ಲ.

ಪಾಕ್ ಪರವಾಗಿ ಮಾರಕ ದಾಳಿ ನಡೆಸಿದ ಹಸನ್ ಅಲಿ 3, ಜುನೈದ್ ಖಾನ್ ಹಾಗೂ ರುಮ್ಮಾನ್ ರೈಸ್ ತಲಾ 2 ವಿಕೆಟ್ ಪಡೆದು ಮಿಂಚಿದ್ದಾರೆ.

212 ರನ್ ಗೆಲುವಿನ ಗುರಿ ಪಡೆದ ಪಾಕಿಸ್ತಾನ ಪರವಾಗಿ ಅಜರ್ ಅಲಿ, ಫಕರ್ ಜಮಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಮೊದಲ ವಿಕೆಟ್ 118 ರನ್ ಜೊತೆಯಾಟವಾಡಿದ್ದಾರೆ.

ಅಜರ್ ಅಲಿ 76, ಫಕರ್ ಜಮಾನ್ 57, ಬಾಬರ್ ಅಜಮ್ ಅಜೇಯ 38, ಮೊಹಮ್ಮದ್ ಹಫೀಜ್ ಅಜೇಯ 31 ರನ್ ಗಳಿಸಿದ್ದಾರೆ.

ಪಾಕ್ 37.1 ಓವರ್ ನಲ್ಲಿ 2 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿ ಭರ್ಜರಿ ಜಯದೊಂದಿಗೆ ಫೈನಲ್ ತಲುಪಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...