alex Certify
ಕನ್ನಡ ದುನಿಯಾ       Mobile App
       

Kannada Duniya

ಸರಣಿ ಸೋಲಿನ ಬೇಸರದ ನಡುವೆ ಕೊಹ್ಲಿಗೆ ‘ಗುಡ್ ನ್ಯೂಸ್’

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋಲಿನ ಬೇಸರದ ನಡುವೆಯೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಖುಷಿ ಸುದ್ದಿಯೊಂದಿದೆ. ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಕೊಹ್ಲಿಯನ್ನು ಅರಸಿ ಬಂದಿದೆ.

ಭಾರತ ತಂಡಕ್ಕೆ ಅಗ್ರಸ್ಥಾನವನ್ನು ತಂದುಕೊಡುವಲ್ಲಿ ಸ್ಟೈಲಿಶ್ ಬ್ಯಾಟ್ಸ್ ಮನ್ ಹಾಗೂ ನಾಯಕ ಕೊಹ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. 2017ರಲ್ಲಿ ಕೊಹ್ಲಿ ಶೇ.77.80 ಸರಾಸರಿಯಲ್ಲಿ 2203 ಟೆಸ್ಟ್ ರನ್ ಬಾರಿಸಿದ್ದಾರೆ. ಇದರಲ್ಲಿ 8 ಶತಕಗಳು ಸೇರಿವೆ.

ಏಕದಿನ ಪಂದ್ಯಗಳಲ್ಲೂ ಕೊಹ್ಲಿ ದಾಖಲೆಗೆ ಸರಿಸಾಟಿ ಯಾರಿಲ್ಲ. 7 ಶತಕ ಸಹಿತ 1818 ರನ್ ಬಾರಿಸಿರುವ ಕೊಹ್ಲಿ ಸರಾಸರಿ 80.63. ಈಗಾಗ್ಲೇ ಏಕದಿನ ಪಂದ್ಯಗಳಲ್ಲಿ 32 ಸೆಂಚುರಿ ಸಿಡಿಸಿರೋ ವಿರಾಟ್, ಸಚಿನ್ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.

ಹಾಗಾಗಿ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗಾಗಿ ವಿರಾಟ್ ಕೊಹ್ಲಿಯನ್ನೇ ಆಯ್ಕೆ ಮಾಡಿದೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಅಧಿಕೃತವಾಗಿ ಪ್ರಕಟಿಸಿದೆ, ವಿರಾಟ್ ಗೆ ಅಭಿನಂದನೆಗಳನ್ನೂ ತಿಳಿಸಿದೆ. ಐಸಿಸಿ ಗೌರವಕ್ಕೆ ಕೊಹ್ಲಿ ಕೂಡ ಧನ್ಯವಾದ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...