alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿಗೆ ತಿವಿಯೋಣ ಎಂದುಕೊಂಡಿದ್ನಂತೆ ಈ ಕ್ರಿಕೆಟಿಗ

cowan

ಭಾರೀ ಜಟಾಪಟಿ ನಡುವೆಯೇ ಭಾರತ-ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ಮುಕ್ತಾಯವಾಗಿದೆ. ಆದ್ರೆ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಡುವಣ ಸಂಘರ್ಷ ತಣ್ಣಗಾಗುತ್ತಿದೆ ಎಂದುಕೊಳ್ಳುವಷ್ಟರಲ್ಲಿ ಕಾಂಗರೂಗಳು ವಿವಾದದ ಬೆಂಕಿಗೆ ತುಪ್ಪ ಸುರಿಯೋ ಕೆಲಸ ಮಾಡ್ತಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರರು ಕೂಡ ಕೊಹ್ಲಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡ್ತಿದ್ದಾರೆ.

ಕೊಹ್ಲಿಗೆ ಸ್ಟಂಪ್ ನಿಂದ್ಲೇ ಚುಚ್ಚಿಬಿಡಬೇಕು ಎನಿಸಿತ್ತು ಅಂತಾ ಆಸೀಸ್ ಮಾಜಿ ಓಪನರ್ ಎಡ್ ಕೋವನ್ ಹೇಳಿದ್ದಾರೆ. ಕೊಹ್ಲಿ ಅಂತಹ ಅನುಚಿತವಾದ ಶಬ್ಧವೊಂದನ್ನು ಉಚ್ಛರಿಸಿದ್ದರು. ಆದ್ರೆ ಸರಣಿ ಮುಗಿಯುವವರೆಗೂ ನಾನು ಆ ಬಗ್ಗೆ ತುಟಿಬಿಚ್ಚಿಲ್ಲ ಅಂತಾ ಕೋವನ್ ಹೇಳಿಕೊಂಡಿದ್ದಾರೆ.

ತೀರಾ ವೈಯಕ್ತಿಕವಾದ ಅನುಚಿತ ಮಾತನ್ನು ಕೊಹ್ಲಿ ಹೇಳಿದ್ದಾರೆ. ಆದ್ರೆ ತಕ್ಷಣಕ್ಕೆ ಆ ಹಿಂದಿ ಪದದ ಅರ್ಥ ತಮಗೆ ಗೊತ್ತಾಗಲಿಲ್ಲ. ಕೊನೆಗೆ ಖುದ್ದು ಅಂಪೈರ್, ಅವರ ಬಳಿ ಬಂದು ಎಚ್ಚರಿಸಿದ್ದರು. ಬಳಿಕ ಕೊಹ್ಲಿ ಕ್ಷಮೆಯನ್ನೂ ಕೇಳಿದ್ದಾರೆ. ಆದ್ರೆ ಆ ಕ್ಷಣದಲ್ಲಿ ಸ್ಟಂಪ್ ತೆಗೆದುಕೊಂಡು ಅವರ ಹೊಟ್ಟೆಗೆ ತಿವಿದುಬಿಡೋಣ ಎನಿಸಿತ್ತು ಅಂತಾ ಕೋವನ್ ಕೆಂಡ ಕಾರಿದ್ದಾರೆ.

ಹಿಂದಿ ಅರ್ಥವಾಗದೇ ಇದ್ದರೂ ಕೊಹ್ಲಿ ಆಡಿರೋದು ಕೆಟ್ಟ ಮಾತು ಅನ್ನೋದು ನಮಗೆಲ್ಲಾ ಗೊತ್ತು. ಹಾಗಂತ ಅವರ ಬಗ್ಗೆ ವೈಯಕ್ತಿಕ ದ್ವೇಷವಿಲ್ಲ, ವಿರಾಟ್ ಒಬ್ಬ ಅದ್ಭುತ ಕ್ರಿಕೆಟಿಗ ಅಂತ ಕೂಡ ಎಡ್ ಕೋವನ್ ಸಮರ್ಥಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...