alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಸ್ಟ್ರೇಲಿಯಾದ ಇಂತಹ ಸ್ಪಿನ್ನರ್ ಗಳನ್ನು ನೋಡೇ ಇಲ್ಲ’

asis-ganguli

ಕೋಲ್ಕತಾ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ, ಭಾರತ ತಂಡ ಹೀನಾಯ ಸೋಲು ಕಂಡಿತ್ತು.

ಬೆಂಗಳೂರಿನಲ್ಲಿ ನಡೆಯುತ್ತಿರುವ 2 ನೇ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾದ 8 ವಿಕೆಟ್ ಪಡೆದು ಆಸೀಸ್ ಬೌಲರ್ ನೇಥನ್ ಲಾಯನ್ ದಾಖಲೆ ಬರೆದಿದ್ದಾರೆ.

ಸ್ಟೀವ್ ಓಕೀಫ್ ಮತ್ತು ನೇಥನ್ ಲಾಯನ್ ಆಸೀಸ್ ಸ್ಪಿನ್ನರ್ ಅಸ್ತ್ರವಾಗಿದ್ದು, ಭಾರತದ ಆಟಗಾರರನ್ನು ಕಟ್ಟಿ ಹಾಕುತ್ತಿದ್ದಾರೆ.

ಇವರಿಬ್ಬರ ಕುರಿತಾಗಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮಾತನಾಡಿದ್ದು, ಇಂತಹ ಆಸೀಸ್ ಬೌಲರ್ ಗಳನ್ನು ನಾನು ನೋಡೇ ಇಲ್ಲ ಎಂದು ಹೇಳಿದ್ದಾರೆ.

ಭಾರತ ತಂಡದ ಆಟಗಾರರ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ ಎಂದು ಸ್ಟೀವ್ ಓಕೀಫ್ ಮತ್ತು ನೇಥನ್ ಲಾಯನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟೆಸ್ಟ್ ಸರಣಿ ಆರಂಭವಾಗುವ ಮೊದಲು ಹೇಳಿಕೆ ನೀಡಿದ್ದ ಗಂಗೂಲಿ, ನಂಬರ್ 1 ಸ್ಥಾನದಲ್ಲಿರುವ ಟೀಂ ಇಂಡಿಯಾ ಸರಣಿಯನ್ನು ವೈಟ್ ವಾಶ್ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಈಗ ಒತ್ತಡ ಹಾಕುವ ಇಂತಹ ಆಸೀಸ್ ಸ್ಪಿನ್ನರ್ ಗಳನ್ನು ನಾನು ನೋಡಿರಲಿಲ್ಲ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...