alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಯಶಸ್ಸಿನ ಹಿಂದಿದ್ದಾರೆ ಈ ಮಾಜಿ ಕ್ರಿಕೆಟಿಗ…!

ವಿರಾಟ್ ಕೊಹ್ಲಿ ಸದ್ಯ ವಿಶ್ವ ಕ್ರಿಕೆಟ್ ನಲ್ಲಿ ಮಿನುಗುವ ತಾರೆ. ಚೇಸಿಂಗ್ ಸ್ಟಾರ್ ಮೈದಾನಕ್ಕೆ ಇಳಿದ್ರೆ ಸಾಕು ದಾಖಲೆಗಳು ನಿರ್ಮಾಣ ಆಗ್ತವೆ. ವಿರಾಟ್, ಭರ್ಜರಿ ಆಟದ ಹಿಂದೆ ಹಲವು ಅನುಭವಿ ಆಟಗಾರರ ಯೋಗದಾನ ಇದೆ. ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರೊಬ್ಬರು, ಕೊಹ್ಲಿ ದೆಹಲಿ ಪರ ರಣಜಿ ಆಡಲು ನಾನೇ ಕಾರಣ ಎಂದು ಹೇಳಿದ್ದಾರೆ.

ಅತುಲ್ ವಾಸನ್ ಟೀಮ್ ಇಂಡಿಯಾದ ಮಾಜಿ ಆಟಗಾರ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅತುಲ್, ವಿರಾಟ್ ಕ್ರೀಡಾ ಬೆಳವಣಿಗೆಯಲ್ಲಿ ತನ್ನದೂ ಪಾತ್ರ ಇರೋದಾಗಿ ತಿಳಿಸಿದ್ದಾರೆ. ಶಾಲಾ ಹಾಗೂ ಕ್ಲಬ್ ಪಂದ್ಯಗಳಲ್ಲಿ ವಿರಾಟ್ ಗೆ ಅವಕಾಶ ನೀಡಲು ನಿರಾಕರಿಸುತ್ತಿದ್ದರು. ನಾನು ವಿರಾಟ್ ರಲ್ಲಿ ಪ್ರತಿಭೆಯನ್ನು ಗುರುತಿಸಿದ್ದೇ. ಅಲ್ಲದೆ ಜೂನಿಯರ್ ಕ್ರಿಕೆಟ್ ನಲ್ಲಿ, ಕೊಹ್ಲಿ ನನ್ನ ಸಂಸ್ಥೆಯ ಪರವಾಗಿ ಆಡಿದ್ದಾರೆ ಎಂದು ತಿಳಿಸಿದ್ದಾರೆ.

ದೆಹಲಿ ರಣಜಿ ತಂಡದಲ್ಲಿ ಇಶಾಂತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಸ್ಥಾನ ನೀಡಲು ಹಿಂದೇಟು ಹಾಕಿದ್ದರು. ನಾನೇ ಒತ್ತಡ ಹಾಕಿ ಅವಕಾಶ ಕೊಡುವಂತೆ ಕೇಳಿದೆ ಎಂದು ಅತುಲ್ ಹೇಳಿದ್ದಾರೆ. ಇನ್ನು ವಿರಾಟ್ ರ ಕೋಚ್ ರಾಜ್ ಕುಮಾರ್ ಶರ್ಮಾ ಹಾಗೂ ನಾನು ಉತ್ತಮ ಸ್ನೇಹಿತರು. ನಾವಿಬ್ಬರು ಸೇರಿ ಈ ಸಂಸ್ಥೆ ಸ್ಥಾಪಿಸಿದ್ದಾಗಿ ತಿಳಿಸಿದ್ದಾರೆ.

ವಿರಾಟ್ ಇಂಗ್ಲೆಂಡ್ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದಿದ್ರು. ಅಲ್ಲದೆ 5 ಟೆಸ್ಟ್ ಸರಣಿಯಲ್ಲಿ 593 ರನ್ ಬಾರಿಸಿ ಟೀಕೆಗಳಿಗೆ ಉತ್ತರ ನೀಡಿದ್ದರು. ಸದ್ಯ ವಿರಾಟ್ ಏಷ್ಯಾಕಪ್ ನಿಂದ ವಿಶ್ರಾಂತಿ ಪಡೆದಿದ್ದು, ಬಿಡುವಿನ ಸಮಯವನ್ನು ಎಂಜಾಯ್ ಮಾಡ್ತಾ ಇದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...