alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಬಗ್ಗೆ ಅನುಷ್ಕಾ ಶರ್ಮ ಹೇಳಿದ್ದೇನು ಗೊತ್ತಾ…?

ನಾನು ಮದುವೆಯಾಗಿರುವುದು ವಿಶ್ವದ ಅತ್ಯಂತ ಶ್ರೇಷ್ಠ ವ್ಯಕ್ತಿಯನ್ನು ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿ ಮಡದಿ, ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಅವರಿಗೆ ಕೇಳಿದ ಪ್ರಶ್ನೆಯೊಂದಕ್ಕೆ ಈ ರೀತಿ ಉತ್ತರಿಸಿದ್ದಾರೆ.

ಅನುಷ್ಕಾ, ಪತಿಯನ್ನು ಹೊಗಳಿ ಹೇಳಿಕೆ ನೀಡಿರುವುದು ಇದೇ ಮೊದಲೇನಲ್ಲ. ಇಂಗ್ಲೆಂಡ್‌ ಪ್ರವಾಸದಲ್ಲಿ ನಾಯಕನ ಆಟ ಪ್ರದರ್ಶಿಸಿರುವ ಕೊಹ್ಲಿಯನ್ನು ಮುಕ್ತ ಕಂಠದಿಂದ ಅವರು ಶ್ಲಾಘಿಸಿದ್ದರು.

ಇಂಗ್ಲೆಂಡ್‌ ಜತೆಗಿನ 5 ಟೆಸ್ಟ್‌ ಸೀರೀಸ್‌ನಲ್ಲಿ ಭಾರತ ಸರಣಿ ಕಳೆದುಕೊಂಡಿದ್ದರೂ, ಭಾರತದ ಆಟಗಾರರ ಪೈಕಿ ಕೊಹ್ಲಿ ಅತ್ಯುತ್ತಮ ಆಟಗಾರ ಎಂದೆನಿಸಿಕೊಂಡಿದ್ದಾರೆ. 68 ರ ಸರಾಸರಿಯಲ್ಲಿ 4 ಮ್ಯಾಚ್‌ಗಳಲ್ಲಿ 544 ರನ್‌ ಗಳಿಸಿರುವ ಕೊಹ್ಲಿ ಬಗ್ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೆಗ್ ಚಾಪೆಲ್‌ ಸಹ ಪ್ರಶಂಸೆಯ ಮಾತುಗಳನ್ನಾಡಿದ್ದರು.

ಎಲ್ಲ ಕಷ್ಟ ಪರಿಸ್ಥಿತಿಗಳನ್ನು ಕೊಹ್ಲಿ ದಿಟ್ಟವಾಗಿ ಎದುರಿಸಿ, ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯುತ್ತಮ ಆಟಗಾರ ಎಂದು ಭಾರತದ ಇಂಗ್ಲೆಂಡ್‌ ಪ್ರವಾಸದ ಬಗ್ಗೆ ಅವರು ಕ್ರಿಕೆಟ್‌ನೆಕ್ಸ್ಟ್‌ಗೆ ಹೇಳಿಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...