alex Certify
ಕನ್ನಡ ದುನಿಯಾ       Mobile App
       

Kannada Duniya

‘ಫಲುಕನುಮಾ’ ಕುರಿತು ತೆಂಡೂಲ್ಕರ್ ಏನೇಳ್ತಾರೆ ಕೇಳಿ

13511415434135falaknuma-palace6ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಸಹೋದರಿ ಅರ್ಪಿತಾ ಖಾನ್ ರ ವಿವಾಹವನ್ನು ನೂರು ಕೋಟಿ ರೂ. ವೆಚ್ಚದಲ್ಲಿ ಹೈದರಾಬಾದಿನ ಫಲುಕನುಮಾ ಪ್ಯಾಲೇಸ್ ನಲ್ಲಿ ನೆರವೇರಿಸಿದ್ದ ವೇಳೆ ಇದು ಹೆಚ್ಚು ಪ್ರಚಾರಕ್ಕೆ ಬಂದಿತ್ತು. ಈ ಅರಮನೆ ಕುರಿತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಏನೇಳ್ತಾರೆ ಕೇಳಿ.

ಹೈದರಾಬಾದ್ ಬಿರಿಯಾನಿಗೆ ಫೇಮಸ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಸಚಿನ್ ತೆಂಡೂಲ್ಕರ್ ಗೆ ಅವರ ಸ್ನೇಹಿತರು ಫಲುಕನುಮಾ ಪ್ಯಾಲೇಸ್ ಕುರಿತು ಬಹಳಷ್ಟು ಹೇಳಿದ್ದರಂತೆ. ಇದರಿಂದ ಕುತೂಹಲಭರಿತರಾಗಿದ್ದ ಸಚಿನ್ ತೆಂಡೂಲ್ಕರ್ ತಮ್ಮ ಕುಟುಂಬದೊಂದಿಗೆ ಫಲುಕನುಮಾ ಪ್ಯಾಲೇಸ್ ಗೆ ತೆರಳಿ ಎರಡು ದಿನಗಳ ಕಾಲ ತಂಗಿದ್ದಾರೆ.

ಅದೊಂದು ಮರೆಯಲಾಗದ ಅನುಭವ ಎಂದು ಹೇಳಿರುವ ಸಚಿನ್ ತೆಂಡೂಲ್ಕರ್, ಫಲುಕನುಮಾ ಪ್ಯಾಲೇಸ್ ಅನ್ನು ಅದ್ಬುತ ಕಲ್ಪನೆ ಹಾಗೂ ದೂರದೃಷ್ಟಿಯನ್ನು ಇಟ್ಟುಕೊಂಡು ನಿರ್ಮಿಸಲಾಗಿದೆ. ಅಲ್ಲಿ ತಂಗಿದ್ದ ದಿನಗಳನ್ನು ತಮ್ಮ ಕುಟುಂಬ ಸದಾ ನೆನಪಿಸಿಕೊಳ್ಳುತ್ತದೆ ಎಂದಿದ್ದಾರೆ. ಐಪಿಎಲ್ ವೇಳೆ ತಮ್ಮ ತಂಡ ಹೈದರಾಬಾದಿನಲ್ಲಿ ನಡೆಯುವ ಪಂದ್ಯಗಳ ಕುರಿತು ಹೆಚ್ಚು ಆಸಕ್ತಿ ಹೊಂದಿರುತ್ತಿತ್ತು ಎಂದೂ ಸಚಿನ್ ಸ್ಮರಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...