alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ಬ್ಯಾಟ್ ಗೆ ಬಲಿಯಾದ ಯುವ ಆಟಗಾರ

bat

ಹೈದ್ರಾಬಾದ್ ನಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದು ಯುವಕನನ್ನೇ ಬಲಿ ಪಡೆದಿದೆ. ಆಕಸ್ಮಿಕವಾಗಿ ಬ್ಯಾಟ್ ತಗುಲಿ 22 ವರ್ಷದ ಯುವಕ ಮೃತಪಟ್ಟಿದ್ದಾನೆ. ಬಹಾದುರ್ಪುರ ಜಿಲ್ಲೆಯಲ್ಲಿ ನಡೆದ ಫ್ರೆಂಡ್ಲಿ ಕ್ರಿಕೆಟ್ ಪಂದ್ಯದಲ್ಲಿ ಈ ಅವಘಡ ಸಂಭವಿಸಿದೆ. ಮಿರ್ ಅಲಂ ಈದ್ಗಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು.

ವಜೀದ್ ಎಂಬ ಯುವಕ ಮೃತ ದುರ್ದೈವಿ. ಈತ ಫೀಲ್ಡಿಂಗ್ ಮಾಡ್ತಾ ಇದ್ದ. ಪಿಚ್ ಬಳಿಯೇ ಈತನನ್ನು ಫೀಲ್ಡಿಂಗ್ ಗೆ ನಿಲ್ಲಿಸಲಾಗಿತ್ತು. ಎದುರಾಳಿ ತಂಡದ ಆಟಗಾರ ಬೀಸಿದ ಬ್ಯಾಟ್ ಆಕಸ್ಮಿಕವಾಗಿ ವಜೀದ್ ಗೆ ತಗುಲಿದೆ.

ಬ್ಯಾಟ್ ತಗುಲಿದ ರಭಸಕ್ಕೆ ವಜೀದ್ ಪಿಚ್ ನಲ್ಲೇ ಕುಸಿದು ಬಿದ್ದಿದ್ದ. ಕೂಡಲೇ ಅವನನ್ನು ಸರ್ಕಾರಿ ಆಸ್ಪತ್ರೆಗೆ ಕರೆತರಲಾಯ್ತು. ಆದ್ರೆ ಆಸ್ಪತ್ರೆಗೆ ಬರುವಷ್ಟರಲ್ಲಿಯೇ ಯುವ ಕ್ರಿಕೆಟಿಗನ ಪ್ರಾಣಪಕ್ಷಿ ಹಾರಿಹೋಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...