alex Certify
ಕನ್ನಡ ದುನಿಯಾ       Mobile App
       

Kannada Duniya

6 ಪಟ್ಟು ಹೆಚ್ಚಾಗ್ತಿದೆ ವಿರಾಟ್ ಕೊಹ್ಲಿ ವೇತನ…!

ಟೀಂ ಇಂಡಿಯಾ ಆಟಗಾರರಿಗೆ ಸದ್ಯದಲ್ಲೇ ವೇತನ ಏರಿಕೆಯಾಗಲಿದೆ. ತಂಡದಲ್ಲಿ ಎಲ್ಲರಿಗಿಂತ ಹೆಚ್ಚು ಸಂಬಳ ಪಡೆಯುವ ಆಟಗಾರ ಅಂದ್ರೆ ನಾಯಕ ವಿರಾಟ್ ಕೊಹ್ಲಿ. 2017-18ರ ಬಿಸಿಸಿಐ ಹೊಸ ಒಪ್ಪಂದದ ಪ್ರಕಾರ ಕೊಹ್ಲಿಯ ವಾರ್ಷಿಕ ವೇತನ 12 ಕೋಟಿ ರೂಪಾಯಿಗೂ ಅಧಿಕವಾಗಲಿದೆ.

ಎ ದರ್ಜೆಯ ಆಟಗಾರರಿಗೆ ವಾರ್ಷಿಕವಾಗಿ ತಲಾ 12 ಕೋಟಿ ಸಂಬಳ ನೀಡಲು ಬಿಸಿಸಿಐ ನಿರ್ಧರಿಸಿದೆ. ಬಿ ದರ್ಜೆಯ ಆಟಗಾರರಿಗೆ ತಲಾ 8 ಕೋಟಿ ರೂಪಾಯಿ ಹಾಗೂ ಸಿ ದರ್ಜೆಯ ಆಟಗಾರರಿಗೆ ತಲಾ 4 ಕೋಟಿ ರೂಪಾಯಿ ವೇತನವನ್ನು ಬಿಸಿಸಿಐ ನಿಗದಿಪಡಿಸಿದೆ ಅಂತಾ ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು ಬಿಸಿಸಿಐ ಎ ದರ್ಜೆಯ ಆಟಗಾರರಿಗೆ ವರ್ಷಕ್ಕೆ ಕೇವಲ 2 ಕೋಟಿ ರೂ. ವೇತನ ನೀಡುತ್ತಿತ್ತು. ಆದ್ರೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟರ್ ಗಳಿಗೆ ತಲಾ 12 ಕೋಟಿ ಸಂಬಳವಿದೆ. ಹಾಗಾಗಿ ಬಿಸಿಸಿಐ ಕೂಡ ವೇತನ ಹೆಚ್ಚಳ ಮಾಡಬೇಕೆಂದು ಕೊಹ್ಲಿ ಹಾಗೂ ಧೋನಿ ಒತ್ತಾಯಿಸಿದ್ದರು.

ಸದ್ಯ ಟೀಂ ಇಂಡಿಯಾದ ಎ ದರ್ಜೆಯ ಆಟಗಾರರೆಂದ್ರೆ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ರವಿಚಂದ್ರನ್ ಅಶ್ವಿನ್, ಅಜಿಂಕ್ಯಾ ರಹಾನೆ, ಚೇತೇಶ್ವರ ಪೂಜಾರ, ರವೀಂದ್ರ ಜಡೇಜ ಮತ್ತು ಮುರುಳಿ ವಿಜಯ್.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...