alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಸದರಿಗೆಲ್ಲ ಸಚಿನ್ ತೆಂಡೂಲ್ಕರ್ ಮಾದರಿ

SACHIN VILLAGEಸಚಿನ್ ರಮೇಶ್ ತೆಂಡೂಲ್ಕರ್ ಟೀಮ್ ಇಂಡಿಯಾ ಪರ ಆಡ್ತಿದ್ದಾಗ ತಂಡದ ಎಲ್ಲ ಆಟಗಾರರಿಗೂ ಮಾದರಿಯಾಗಿದ್ರು. ಒಬ್ಬ ಸಂಸದನಾಗಿಯೂ ಅವರು ಇತರ ರಾಜಕಾರಣಿಗಳಿಗೆಲ್ಲ ಮಾದರಿ ಎನಿಸಿದ್ದಾರೆ. ಸಂಸದರೆಲ್ಲ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಲಿ ಅನ್ನೋ ಕಾರಣಕ್ಕೆ 2014ರ ಅಕ್ಟೋಬರ್ ನಲ್ಲಿ ಸಂಸದ ಆದರ್ಶ ಗ್ರಾಮ ಯೋಜನೆ ಜಾರಿ ಮಾಡಲಾಗಿತ್ತು.

2019 ರ ವೇಳೆಗೆಲ್ಲಾ ಪ್ರತಿಯೊಬ್ಬ ಸಂಸದರು ಕನಿಷ್ಠ 3 ಗ್ರಾಮವನ್ನಾದ್ರೂ ಉದ್ಧಾರ ಮಾಡಬೇಕು ಅನ್ನೋದು ಯೋಜನೆಯ ಉದ್ದೇಶ. ಈ ಯೋಜನೆಯ ಸದುದ್ದೇಶವನ್ನು ಸಾಕಾರಗೊಳಿಸಿದ ಏಕೈಕ ಸಂಸದ ಸಚಿನ್ ತೆಂಡೂಲ್ಕರ್. ಮಾಸ್ಟರ್ ಬ್ಲಾಸ್ಟರ್ ದತ್ತು ಪಡೆದ ಆಂಧ್ರದ ನೆಲ್ಲೂರು ಜಿಲ್ಲೆಯ ಪುಟ್ಟಮ್ರಾಜು ಕಂಡ್ರಿಗಾ ಗ್ರಾಮದಲ್ಲಿ ಅಚ್ಚರಿಯ ಬದಲಾವಣೆಗಳಾಗಿವೆ. ಇತರ ಹಳ್ಳಿಗಳಿಗೆ ಮಾದರಿಯಾಗುವತ್ತ ಅದು ದಾಪುಗಾಲಿಕ್ಕಿದೆ.

ಪುಟ್ಟಮ್ರಾಜು ಕಂಡ್ರಿಗಾ ಮೂಲ ಸೌಕರ್ಯಗಳೇ ಇಲ್ಲದ ಕೊಳಗೇರಿಯಾಗಿತ್ತು. ಆದ್ರೀಗ ಈ ಹಳ್ಳಿಗೆ ಡಾಂಬರು ರಸ್ತೆ ಇದೆ, 24 ಗಂಟೆ ನೀರು ಮತ್ತು ವಿದ್ಯುತ್ ಸರಬರಾಜಾಗ್ತಿದೆ. ಮಕ್ಕಳಿಗಾಗಿ ಆಟದ ಮೈದಾನ, ಸಮುದಾಯ ಭವನ, ಸೂಕ್ತ ಚರಂಡಿ ವ್ಯವಸ್ಥೆ ಎಲ್ಲವನ್ನೂ ಕಲ್ಪಿಸಲಾಗಿದೆ. ಇನ್ನು ಊರಿನಲ್ಲೊಂದು ಶಾಲೆಯಿದ್ದು, ಅಲ್ಲಿ ಶೌಚಾಲಯ ಹಾಗೂ ಹುಡುಗಿಯರಿಗಾಗಿ ವಿಶ್ರಾಂತಿ ಕೊಠಡಿಯೊಂದನ್ನು ನಿರ್ಮಿಸಲಾಗಿದೆ.

ಅಷ್ಟೇ ಅಲ್ಲ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಮಧ್ಯಾಹ್ನದ ಊಟವನ್ನೂ ಕೊಡಲಾಗ್ತಿದೆ. ಇಷ್ಟೆಲ್ಲ ಆಗಿದ್ದು ಸಚಿನ್ ತೆಂಡೂಲ್ಕರ್ ಅವರ ಕಾಳಜಿಯಿಂದ. ಸಚಿನ್ ಈ ಗ್ರಾಮದ ಅಭಿವೃದ್ಧಿಗಾಗಿ ಸಂಸದರ ನಿಧಿಯಿಂದ 2.90 ಕೋಟಿ ರೂಪಾಯಿ ನೀಡಿದ್ದಾರೆ. ಸಚಿನ್ ಅವರಂತೆ ಎಲ್ಲ ಸಂಸದರೂ ತಾವು ದತ್ತು ಪಡೆದ ಗ್ರಾಮದ ಅಭಿವೃದ್ಧಿಗೆ ಮನಸ್ಸು ಮಾಡಿದ್ರೆ ದೇಶದ ಅಭಿವೃದ್ಧಿ ಖಂಡಿತವಾಗಿಯೂ ಸಾಧ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...