alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶ, ಹಿಮಾ ದಾಸ್ ಪದಕ ಗೆದ್ದ ಸಂಭ್ರಮವನ್ನಾಚರಿಸುತ್ತಿದ್ದರೆ ಜಾತಿ ಹುಡುಕುತ್ತಿದ್ದರು ಈ ನೀಚರು

ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಜೂನಿಯರ್ ಸ್ಪರ್ಧೆಯಲ್ಲಿ ಭಾರತದ ಹಿಮಾ ದಾಸ್ ಚಿನ್ನದ ಪದಕ ಗೆಲ್ಲುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಹಿಮಾ ದಾಸ್ ಅವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಜನ ಅಭಿನಂದಿಸುತ್ತಿರುವ ಸಂದರ್ಭದಲ್ಲೇ ಕೆಲವರ ನಡವಳಿಕೆ ಎಲ್ಲರನ್ನೂ ತಲೆ ತಗ್ಗಿಸುವಂತೆ ಮಾಡಿದೆ.

ಹಿಮಾ ದಾಸ್, ಚಿನ್ನದ ಪದಕ ಗೆಲ್ಲುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಗೂಗಲ್ ನಲ್ಲಿ ಕೆಲವರು ಹಿಮಾ ದಾಸ್ ಯಾವ ಜಾತಿಗೆ ಸೇರಿದ್ದಾರೆಂಬುದನ್ನು ಹುಡುಕಿದ್ದಾರೆ.

ಜಾತ್ಯಾತೀತ ರಾಷ್ಟ್ರ ಭಾರತದಲ್ಲಿ ಜಾತೀಯತೆ ಇನ್ನೂ ಯಾವ ಮಟ್ಟದಲ್ಲಿ ತಾಂಡವವಾಡುತ್ತಿದೆ ಎಂಬುದನ್ನು ಇದು ತೋರಿಸುತ್ತಿದ್ದು, 2016 ರ ರಿಯೋ ಒಲಂಪಿಕ್ಸ್ ನಲ್ಲಿ ಪಿ.ವಿ. ಸಿಂಧು ಹಾಗೂ ಸಾಕ್ಷಿ ಮಲ್ಲಿಕ್ ಪದಕ ಗೆದ್ದ ಸಂದರ್ಭದಲ್ಲಿಯೂ ಅವರುಗಳ ಜಾತಿಯನ್ನು ಗೂಗಲ್ ನಲ್ಲಿ ಕೆಲವರು ಹುಡುಕಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...